ಒಮ್ಮೆ 200 ಮೊಟ್ಟೆ ಇಡುವ ಸೊಳ್ಳೆ ಹರಡುತ್ತದೆ ಸಾಂಕ್ರಾಮಿಕ

Holalkere, Amritpur, Solle,
Published on

ಹೊಳಲ್ಕೆರೆ: ಸೊಳ್ಳೆ ಒಮ್ಮೆಲೇ ಕನಿಷ್ಠ 200 ಮೊಟ್ಟೆಗಳನ್ನಿಡುತ್ತದೆ. ಅತಿ ಶೀಘ್ರ ಮತ್ತು ಬಹು ವ್ಯಾಪಕವಾಗಿ ಹರಡುತ್ತದೆ. ಮನುಷ್ಯರ ರಕ್ತವೇ ಇದರ ಆಹಾರ. ಹಾಗಾಗಿ ಪ್ರತಿಯೊಬ್ಬರೂ ನೀರಿನ ಮೂಲಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಆರೋಗ್ಯ ಪರಿವೀಕ್ಷಕ ಕುಮಾರ್ ಹೇಳಿದರು.

ಅಮೃತಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಡೆಂೇ ನಿರ್ಮೂಲನ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತಾನಾಡಿ, ನೀರಿನ ಮೇಲೆಯೇ ಸೊಳ್ಳೆ ಜೀವನ. ಇದರ ಮೊಟ್ಟೆ ಲಾರ್ವ ಆಗಿ ಸೊಳ್ಳೆಯಾಗಿ ಪರಿವರ್ತನೆ ಹೊಂದು ತನ್ನ ಸಂತತಿಯನ್ನು ವೃದ್ಧಿಸಿಕೊಳ್ಳುತ್ತ ನಾನಾ ಸಾಂಕ್ರಾಮಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ಬಹಳ ರೋಗಗಳಿಗೆ ಸೊಳ್ಳೆಯೇ ಕಾರಣ. ಈ ಕೀಟ ಚಿಕ್ಕದಾದರೂ ಇದರ ಬಾಧೆ ದೊಡ್ಡದು ಎಂದು ಸೊಳ್ಳೆಯ ಜೀವನ ಚಕ್ರವನ್ನು ಶಾಲಾ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸುವ ಜತೆಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.

ಮಾಸಾಚರಣೆ ನೇತೃತ್ವ ವಹಿಸಿದ್ದ ಡಾ.ಜಯಮ್ಮ ಮಾತನಾಡಿ, ರೋಗ ಬಂದಾಗ ಆಸ್ಪತ್ರೆಗೆ ಅಲೆದಾಡುವ ಬದಲು ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ಉತ್ತಮ ಆರೋಗ್ಯದ ಲಕ್ಷಣ. ಡೆಂೇ, ಚಿಕುನ್ ಗುನ್ಯದಂತಹ ರೋಗಗಳು ಸೊಳ್ಳೆ ಕಡಿತದಿಂದ ಬರುತ್ತವೆ. ಸೊಳ್ಳೆ ಹರಡದಂತೆ ಸ್ವಚ್ಛತೆ ಕಾಪಾಡಬೇಕು ಎಂದು ಹೇಳಿದರು.

ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನ ಬೆಳೆಸುತ್ತವೆ. ಮನೆಯಲ್ಲಿ ನೀರಿನ ಪಾತ್ರೆಗಳನ್ನು ಮುಚ್ಚಿಡಿ. ತೊಟ್ಟಿಗಳ ನೀರನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಮನೆ ಮುಂದಿನ ಚರಂಡಿ, ಬೀದಿಯಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮದಲ್ಲಿ ಡೆಂೇ ನಿಯಂತ್ರಣಕ್ಕೆ ಜಾಗೃತಿ ಜಾಥಾ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಸೊಳ್ಳೆ ನಿಯಂತ್ರಣದ ವಿಡಿಯೋ ಪ್ರಾತ್ಯಕ್ಷಿಕೆ ತೋರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net