ತಾಳಕಟ್ಟದಲ್ಲಿ ಬೇವಿನ ಸೀರೆ ಉತ್ಸವ

HLK JATRE 12
Published on

ಹೊಳಲ್ಕೆರೆ: ತಾಲೂಕಿನ ತಾಳಕಟ್ಟ ಗ್ರಾಮದ ಶ್ರೀ ಕರಿಯಮ್ಮ ದೇವಿ ಜಾತ್ರೆ ಅಂಗವಾಗಿ ಬುಧವಾರ ರಾತ್ರಿ ಬೇವಿನ ಸೀರೆ ಉತ್ಸವ ಅದ್ದೂರಿಯಾಗಿ ಜರುಗಿತು.

ರಾತ್ರಿ 11ಕ್ಕೆ ಆರಂಭವಾದ ಬೇವಿನ ಸೀರೆ ಉತ್ಸವವು ಗುರುವಾರ ಮುಂಜಾನೆ 4 ಗಂಟೆವರೆಗೂ ಸಾಗಿತು. ಸೋಮದೇವರ ಕುಣಿತ ಎಲ್ಲರ ಉತ್ಸಾಹ ಇಮ್ಮಡಿಗೊಳಿಸಿತು. ವಿವಿಧ ಗ್ರಾಮಗಳ ಮಹಿಳೆಯರು ಇಡೀ ದಿನ ಉಪವಾಸ ಮಾಡಿ ದೇಗುಲಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ, ಬೇವಿನ ಸೊಪ್ಪನ್ನು ಕೈಯಲ್ಲಿ ಹಿಡಿದು ಬೇವಿನ ಸೀರೆ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಬಳಿಕ ಆನೆ, ಕುದುರೆ ಉತ್ಸವ ಜರುಗಿತು. ಶುಕ್ರವಾರ ರಾತ್ರಿ 10ಕ್ಕೆ ಭಂಡಾರ ತಣಿಗೆ ಉತ್ಸವ, ಬೆಳಗಿನ ಜಾವ 2.30ಕ್ಕೆ ಕೆಂಡದಾರ್ಚನೆ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net