

ಹೊಳಲ್ಕೆರೆ: ತಾಲೂಕು ಎಚ್.ಡಿ.ಪುರದ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿರುವ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕು ಕುಂದಗೋಳದ ನಿರಾಶ್ರಿತರನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ.ಗಿರೀಶ್ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದರು.
ಎರಕ ವೃತ್ತಿಯ ಇವರು ಇತ್ತೀಚೆಗೆ ಈ ಪ್ರದೇಶಕ್ಕೆ ಬಂದಿದ್ದರು. ಆದರೆ, ಲಾಕ್‌ಡೌನ್ ಆದ ಬಳಿಕ ತಮ್ಮೂರಿಗೆ ತೆರಳಲು ಸಾಧ್ಯವಾಗದ ಮೂರು ಕುಟುಂಬಗಳಿಗೆ ಹಾಸ್ಟೆಲ್‌ನಲ್ಲಿ ಗ್ರಾಪಂ ಆಶ್ರಯ ಒದಗಿಸಿದೆ.
ಜಿಪಂ ಸದಸ್ಯ ಡಿ.ಕೆ.ಶಿವಮೂರ್ತಿ ಅವರು ನಿರಾಶ್ರಿತರ ಅಗತ್ಯ ಆಹಾರ ಸಾಮಗ್ರ ವಿತರಿಸಿದರು. ಗ್ರಾಪ ಅಧ್ಯಕ್ಷ ರವಿಕುಮಾರ್, ಪಿಡಿಒ ಜಯಣ್ಣ ಮತ್ತಿತರರು ಇದ್ದರು.