ಹೊಳಲ್ಕೆರೆಯಲ್ಲಿ ಮುಂಜಾಗ್ರತ ಕ್ರಮ

HLK TASK FORCE TEAM 18
Published on

ಹೊಳಲ್ಕೆರೆ: ತಾಲೂಕಿನಲ್ಲಿ ಕರೊನಾ ತಡೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಕೆ.ನಾಗರಾಜ್ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿ, ಇದುವರೆಗೆ ಕೊರೊನಾ ಸೋಂಕಿನ ಯಾವುದೇ ಶಂಕಿತ ಪ್ರಕರಣಗಳು ವರದಿಯಾಗಿಲ್ಲ. ಆದರೂ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದರು.

ತಾಲೂಕು ಆರೊಗ್ಯಾಧಿಕಾರಿ ಡಾ.ಜಯಸಿಂಹ ಮಾತನಾಡಿ, ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಮದ್ಯದಂಗಡಿ, ಲಾಡ್ಜ್ ಮಾಲೀಕರು ಹೊರಗಡೆಯಿಂದ ಬರುವವರ ಕುರಿತು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ತಾಪಂ ಇಒ ತಾರಾನಾಥ್, ಪಪಂ ಮುಖ್ಯಾಧಿಕಾರಿ ವಾಸೀಂ ಇತರರು ಉಪಸ್ಥಿತರಿದ್ದರು.
==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net