ಮಾಸ್ಕ್ ದಿನಾಚರಣೆ ಜಾಗೃತಿ ಜಾಥಾ

HLK MASK 19
Published on

ಹೊಳಲ್ಕೆರೆ: ತಾಲೂಕು ಆಡಳಿತ, ಪೊಲೀಸ್, ಆರೋಗ್ಯ ಇಲಾಖೆ, ರೆಡ್‌ಕ್ರಾಸ್ ಸಹಯೋಗದಲ್ಲಿ ಗುರುವಾರ ಪಟ್ಟಣದಲ್ಲಿ ಮಾಸ್ಕ್ ಡೇ ಜನ ಜಾಗೃತಿ ಜಾಥಾ ನಡೆಸಲಾಯಿತು.

ಪಟ್ಟಣ ಪಂಚಾಯಿತಿ ಕಚೇರಿಯಿಂದ ಬಸ್‌ನಿಲ್ದಾಣ, ಗಣಪತಿ ರಸ್ತೆ ಮೂಲಕ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ತಹಸೀಲ್ದಾರ್ ಕೆ.ನಾಗರಾಜ್ ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು. ಇದು ನಮ್ಮ ಆರೋಗ್ಯ ಕಾಪಾಡಲಿದೆ ಎಂದು ಹೇಳಿದರು.

ಪ.ಪಂ. ಮುಖ್ಯಾಧಿಕಾರಿ ಎ.ವಾಸಿಂ, ಟಿಎಚ್‌ಒ ಡಾ.ಜಯಸಿಂಹ, ಸಿಪಿಐ ರವೀಶ್, ಪಿಎಸ್‌ಐ ರಾಮಚಂದ್ರಪ್ಪ, ಎಎಸ್‌ಐ ಸ್ವಾಮಿ, ರೆಡ್‌ಕ್ರಾಸ್ ಕಾರ್ಯದರ್ಶಿ ಅನಿತಾ ತಿಪ್ಪೇಸ್ವಾಮಿ, ಸದಸ್ಯರಾದ ಗಿರೀಶ್, ಚೇತನ ಜೈನ್, ಆರೋಗ್ಯಾಧಿಕಾರಿ ಪರಮೇಶ್ವರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net