ಕರೊನಾ ಸೋಂಕಿತರ ಸಂಖ್ಯೆ ಕಡಿಮೆ

HLK MLA CHANDRA 27
Published on

ಹೊಳಲ್ಕೆರೆ: ಕರೊನಾ ಸೋಂಕು ತಡೆಗಟ್ಟುವವಲ್ಲಿ ರಾಜ್ಯ ಸರ್ಕಾರ ಯಶಸ್ಸು ಸಾಧಿಸುತ್ತಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಕರೊನಾ ವೈರಸ್ ಕುರಿತು ಜಾಗೃತಿ ಹಾಗೂ ನಿರಾಶ್ರಿತರಿಗೆ ಸೋಮವಾರ ಪಡಿತರ ಧಾನ್ಯ ವಿತರಿಸಿ ಮಾತನಾಡಿದರು.

ರಾಜ್ಯದಲ್ಲಿ ಈಗಾಗಲೆ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದೆ. ಬೆಂಗಳೂರು, ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಯಾರಾದರು ಹೋಗಿದ್ದರೆ ಅಂತವರನ್ನು ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ ಮಾಹಿತಿ ನೀಡಬೇಕು. ಸೋಂಕು ವ್ಯಕ್ತಿ ಮಾತ್ರವಲ್ಲ ವಸ್ತುಗಳಿಂದಲೂ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಎಚ್ಚರ ವಹಿಸಬೇಕು ಎಂದರು.

ಪಡಿತರ ದಾನಿ ಗೌಡರ ಇಂದ್ರಪ್ಪ, ಜಿಪಂ ಸದಸ್ಯರಾದ ಸುಮಾ ಲಿಂಗರಾಜ್, ಎಂ.ಬಿ.ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಎಲ್.ಬಿ.ರಾಜಶೇಖರ್, ಬಿಜೆಪಿ ಅಧ್ಯಕ್ಷ ಕಾಶಿ ಸಿದ್ದೇಶ್, ಗ್ರಾಪಂ ಅಧ್ಯಕ್ಷ ಡಿ.ಸಿ.ಮೋಹನ್, ಈಶ್ವರಪ್ಪ, ಪಪಂ ಸದಸ್ಯರಾದ ಪಿ.ಎಚ್.ಮುರುಗೇಶ್, ಅಶೋಕ್, ಎಚ್.ಆರ್.ನಾಗರತ್ನ, ವಕೀಲ ವೇದಮೂರ್ತಿ ಇತರರಿದ್ದರು.

ಬೀದಿ ಬದಿ ವ್ಯಾಪಾರಸ್ಥರಿಗೆ ಕಿಟ್ ವಿತರಣೆ: ಪಟ್ಟಣದ ಕೆ.ಇ.ಬಿ. ಕಚೇರಿ ಎದುರಿಗೆ ಬಿಡಾರ ಹಾಕಿಕೊಂಡಿರುವ ವ್ಯಾಪಾರಸ್ಥರಿಗೆ ಆಹಾರ ದಿನಸಿ ಕಿಟ್‌ಗಳನ್ನು ಶಾಸಕ ಎಂ.ಚಂದ್ರಪ್ಪ ಸೋಮವಾರ ವಿತರಿಸಿದರು. ಜಿಪಂ ಸದಸ್ಯ ತಿಪ್ಪೆಸ್ವಾಮಿ, ನಾಗರತ್ನಮ್ಮ ವೇದಮೂರ್ತಿ, ಲಿಂಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net