ಲಾಕ್‌ಡೌನ್ ಸಡಿಲಿಕೆ ದುರುಪಯೋಗ ಆಗದಿರಲಿ

HLK KAMAGARI 04
Published on

ಹೊಳಲ್ಕೆರೆ: ರಾಜ್ಯ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದೆ ಎಂದು ನಾಗರಿಕರು ನಿರ್ಲಕ್ಷೃ ವಹಿಸಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡೇ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕರೊನಾ ವೈರಸ್ ವಿರುದ್ಧ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಹೋರಾಟ ನಡೆಯುತ್ತಿದೆ. ಇದರ ನಿರ್ಮೂಲನೆಗೆ ಔಷಧ ಕಂಡು ಹಿಡಿಯಲು ವಿಶ್ವದೆಲ್ಲೆಡೆ ಸಂಶೋಧನೆ ನಡೆಯುತ್ತಿದೆ. ನಾವೆಲ್ಲ ಮನೆಯಲ್ಲಿದ್ದು ಎಚ್ಚರ ವಹಿಸೋಣ ಎಂದರು.

ಸಾರ್ವಜನಿಕರಿಗೆ ಗುಣಮಟ್ಟದ ಸಾರಿಗೆ ಸೌಲಭ್ಯ ಕಲ್ಪಿಸಲಿಕ್ಕಾಗಿ 10 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ನಿಲ್ದಾಣ ಆವರಣದಲ್ಲೇ ಜನರ ರಕ್ಷೆಗಾಗಿ 10 ಲಕ್ಷ ರೂ. ವೆಚ್ಚದಲ್ಲಿ ಆಂಜನೇಯಸ್ವಾಮಿ ದೇಗುಲ ನಿರ್ಮಿಸಲಾಗುತ್ತಿದೆ ಎಂದರು.

ಮಠದ ಗಂಗಾಧರಯ್ಯ ಸ್ವಾಮಿ, ಪಪಂ ಸದಸ್ಯರಾದ ವಿಜಯ್, ಪಿ.ಎಚ್. ಮುರುಗೇಶ್, ಕೆ.ಸಿ. ರಮೇಶ್, ಎಚ್.ಆರ್. ನಾಗರತ್ನ ವೇದಮೂರ್ತಿ, ಮುಖ್ಯಾಧಿಕಾರಿ ಎ. ವಾಸಿಂ, ಆರೋಗ್ಯಾಧಿಕಾರಿ ಪರಮೇಶ್ವರಪ್ಪ, ಗುತ್ತಿಗೆದಾರರ ಪ್ರವೀಣ್, ಬಸವರಾಜ್ ಯಾದವ್, ಎಂ.ಎಲ್. ಕಿಟ್ಟಣ್ಣ, ಅನಿಲ್‌ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net