ದಗ್ಗೆಯಲ್ಲಿ ಬಸವೇಶ್ವರ ಸ್ವಾಮಿ ಜಾತ್ರೆ

HYR shiva namskara 22
Published on

ಹೊಳಲ್ಕೆರೆ: ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ತಾಲೂಕಿನ ಬ್ರಹ್ಮಪುರದಲ್ಲಿ ಶುಕ್ರವಾರ ಆರಂಭವಾಗಿರುವ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.24ರ ವರೆಗೆ ನಡೆಯಲಿದೆ.

23ರ ಬೆಳಗ್ಗೆ 5ರಿಂದ ಗುಗ್ಗಳ ಸೇವೆ, 10.30ಕ್ಕೆ ವೀರಭದ್ರಸ್ವಾಮಿ ಕೆಂಡಾರ್ಚನೆ ಮತ್ತು ಕತ್ತಿ ಪವಾಡ ಇರುತ್ತದೆ. ಮಧ್ಯಾಹ್ನ 12.30ಕ್ಕೆ ಅನ್ನದಾಸೋಹ, ಸಂಜೆ 6.30ಕ್ಕೆ ಧೂಳು ಉತ್ಸವ, ರಾತ್ರಿ 8 ಗಂಟೆಗೆ ಹೂವಿನ ಪಲ್ಲಕ್ಕಿ ಉತ್ಸವ, 24ರ ಮಧ್ಯಾಹ್ನ 12ಕ್ಕೆ ಓಕಳಿ, 1 ಗಂಟೆಗೆ ಶನಿ ಮಹಾತ್ಮೆ ಪುರಾಣ, ನಂತರ ಕಾಶಿಕಡಲೆ. 24ರ ರಾತ್ರಿ 8.30ಕ್ಕೆ ಬೃಹನ್ಮಠ ಜಮುರಾ ಕಲಾ ತಂಡದಿಂದ ಬುದ್ಧ, ಬಸವ ನಾಟಕ ಪ್ರದರ್ಶನಗೊಳ್ಳಲಿದೆ.

ಶಾಸಕ ಎಂ.ಚಂದ್ರಪ್ಪ, ಗ್ರಾಪಂ ಅಧ್ಯಕ್ಷ ಮಹಂತೇಶ್, ರಾಜ್ಯ ಸಹಕಾರಿ ಮಹಾ ಮಂಡಳ ನಿರ್ದೇಶಕ ಎಸ್.ಆರ್.ಗಿರೀಶ್, ತಾಪಂ ಸದಸ್ಯ ನಲ್ಲಿಕಟ್ಟೆ ಜಗದೀಶ್, ಮಾಜಿ ಸದಸ್ಯ ಚಿತ್ರಹಳ್ಳಿ ದೇವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್ ಭಾಗವಹಿಸಲಿದ್ದಾರೆ ಎಂದು ಗ್ರಾಪಂ ಸದಸ್ಯ ದಗ್ಗೆ ಶಿವಪ್ರಕಾಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net