ನಾಳೆ ಸೇವಾಲಾಲ್ ಜಯಂತಿ

sevalal maharaj
Published on

ಹೊಳಲ್ಕೆರೆ: ಸಂತ ಸೇವಾಲಾಲ್ 281ನೇ ಜಯಂತೋತ್ಸವವನ್ನು ಫೆ.24ರಂದು ಬಯಲು ರಂಗಮಂದಿರದಲ್ಲಿ ನಡೆಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಬಂಜಾರ ಸಂಘದ ಮುಖಂಡ, ಹಿರಿಯ ವಕೀಲ ಕೆ.ಆರ್.ಈಶ್ವರನಾಯ್ಕ ತಿಳಿಸಿದರು.

ಫೆ.24ರಂದು ಕಾಟಿ ಆರೋಹನ, ತಾಂಡಾ ಸಾಂಪ್ರಾದಾಯಿಕ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಸತ್ಸಂಗ, ವಾಜಾಭಜನ್, ನೃತ್ಯ ನಮನ ಕಾರ್ಯಕ್ರಮಗಳು ನಡೆಯಲಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪೂರ್ಣಕುಂಭ ಮೆರವಣಿಗೆಯಲ್ಲಿ ತಾಲೂಕಿನ 33 ತಾಂಡಗಳಿಂದ ನೂರಾರು ವೇಷಭೂಷಣಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ ಎಂದರು.

ವಕೀಲ ಲೋಕೇಶ್ ನಾಯ್ಕ, ಸಮಿತಿ ಅಧ್ಯಕ್ಷ ಎಂ.ರಾಜೇಶ್, ಕೋಶಾಧ್ಯಕ್ಷ ಯು.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಂ.ಚಂದ್ರನಾಯ್ಕ, ಆರ್.ಬಸವರಾಜ್‌ನಾಯ್ಕ, ಮೂರ್ತಿ ನಾಯ್ಕ, ಜಯನಾಯ್ಕ, ಜಗದೀಶ್ ನಾಯ್ಕ, ಮಹೇಶ್, ರಂಗಸ್ವಾಮಿ, ನಾಗರಾಜ್, ಪುಟ್ಟನಾಯ್ಕ, ಸುರೇಶ್ ನಾಯ್ಕ, ಹೇಮಂತ ನಾಯ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net