ಸ್ವಾವಲಂಬಿ ಭಾರತ ಎಲ್ಲರ ಹೊಣೆ

HLK MODI 14
Published on

ಹೊಳಲ್ಕೆರೆ: ಸ್ವಾವಲಂಬಿ ಭಾರತ ಕಟ್ಟುವ ಮೂಲಕ ಸಶಕ್ತ ರಾಷ್ಟ್ರ ನಿರ್ಮಾಣದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಮೋದಿ ಸರ್ಕಾರದ ಸಾಧನೆಯ ಕುರಿತ ಕರಪತ್ರಗಳನ್ನು ಮನೆ ಮನೆಗೆ ತೆರಳಿ ಹಂಚುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋವಿಂಡ್-19 ಸೋಂಕು ಮುಕ್ತವನ್ನಾಗಿಸಲು ಪ್ರತಿಯೊಬ್ಬರು ಮಾಸ್ಕ್ ಹಾಕಬೇಕು. ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಸಾಕಷ್ಟು ಜಾಗೃತಿ ಕೈಗೊಂಡಿದೆ ಎಂದರು.

ತಾಲೂಕು ಅಧ್ಯಕ್ಷ ಎಂ.ಬಿ.ಸಿದ್ದೇಶ್, ಪಪಂ ಸದಸ್ಯರಾದ ಎಚ್.ಆರ್.ನಾಗರತ್ನ ವೇದಮೂರ್ತಿ, ಪಿ.ಆರ್.ಮಲ್ಲಿಕಾರ್ಜುನ್, ಅಶೋಕ್, ಕೆ.ಸಿ.ರಮೇಶ್, ಮಾಜಿ ಉಪಾಧ್ಯಕ್ಷ ಕೆ.ಆರ್.ರಾಜಪ್ಪ, ಮುಖಂಡರಾದ ಬಂಗಿ ಲೋಕೇಶ್, ರುದ್ರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net