

ಹೊಳಲ್ಕೆರೆ: ರಸ್ತೆಯಲ್ಲಿ ಉಗುಳುವರ ವಿರುದ್ಧ ಕಾನೂನು ಕ್ರಮದ ಕುರಿತು ಪಟ್ಟಣ ಪಂಚಾಯಿತಿ, ಪೊಲೀಸ್ ಇಲಾಖೆ, ರೆಡ್‌ಕ್ರಾಸ್ ಸಹಯೋಗದಲ್ಲಿ ಜಾಗೃತಿ ಮೂಡಿಸಲಾಯಿತು.
ಪಟ್ಟಣದ ವಿವಿಧೆಡೆ ಅಂಗಡಿ-ಮುಂಗಟ್ಟು ಗೋಡೆಗಳ ಮೇಲೆ ಜಾಗೃತಿ ಪೋಸ್ಟರ್ ಅಂಟಿಸಲಾಯಿತು. ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಅನಿತಾ ತಿಪ್ಪೇಸ್ವಾಮಿ, ಸದಸ್ಯರಾದ ಬಿ.ಜಿ.ಗಿರೀಶ್, ಮಾರುತೇಶ್, ಚೇತನ್‌ಜೈನ್, ದರ್ಶನ್, ಮುಖ್ಯಾಧಿಕಾರಿ ಎ.ವಾಸಿಂ, ಪಪಂ ಸದಸ್ಯ ಕೆ.ಸಿ.ರಮೇಶ್, ಬಿ.ಕೆ.ಸುಮಿತ್ರಾ, ಆರೋಗ್ಯಾಧಿಕಾರಿ ಪರಮೇಶ್ವರಪ್ಪ ಇತರರಿದ್ದರು.