

ಹೊಳಲ್ಕೆರೆ; ಪಟ್ಟಣದ 1ನೇ ವಾರ್ಡ್‌ನ ಅಭಿವೃದ್ಧಿಗೆ 3.25 ಕೋಟಿ ರೂ., ಬಯಲು ಗಣಪತಿ ದೇವಸ್ಥಾನದ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ., ಚರಂಡಿ ಕಾಮಗಾರಿಗೆ 75 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಬಯಲು ಗಣಪತಿ ದೇವಸ್ಥಾನದ ಹತ್ತಿರದ ರಸ್ತೆ ವಿಸ್ತರಣೆ ಕಾಮಗಾರಿ ಪರಿಶೀಲಿಸಿ ಮಾತನಾಡಿ, ಐತಿಹಾಸಿಕ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಸುಗಮ ಸಂಚಾರಕ್ಕೆ ಅನುಕೂಲವಾಗುವ ಉದ್ದೇಶದಿಂದ ರಸ್ತೆ ವಿಸ್ತರಣೆ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದರು.
ಇಲ್ಲಿನ ಕೋಟೆ ಜನವಸತಿ ಪ್ರದೇಶದಲ್ಲಿ ಸಮರ್ಪಕ ಚರಂಡಿ ಸೌಲಭ್ಯ ಕಲ್ಪಿಸುವಂತೆ ವಾರ್ಡ್ ಕೌನ್ಸಿಲರ್ ಎಚ್.ಆರ್.ನಾಗರತ್ನ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಏಕಮುಖ ಸಿಸಿ ರಸ್ತೆ, ಒಳಚರಂಡಿ, ರಸ್ತೆಯ ಎರಡು ಬದಿ ವಿದ್ಯುತ್ ಕಂಬ ಅಳವಡಿಸುತ್ತಿರುವುದಾಗಿ ತಿಳಿಸಿದರು.
1ನೇ ವಾರ್ಡ್‌ನಲ್ಲಿರುವ ಬಡವರಿಗೆ 65 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ತಲಾ ಒಂದು ಮನೆಗೆ 5 ಲಕ್ಷ ರೂ. ಅನುದಾನ ನೀಡಿದ್ದು, ಆರ್‌ಸಿಸಿ ರೂಫ್ ಇರುವ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ವಾರ್ಡ್‌ನಲ್ಲಿರುವ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮಾಡಲಾಗುತ್ತದೆ ಎಂದರು.
ಗುತ್ತಿಗೆದಾರ ರಾಜಣ್ಣ, ಎಪಿಎಂಸಿ ನಿರ್ದೇಶಕ ಮರುಳಸಿದ್ದೇಶ್ವರ್, ಬಸವರಾಜ್, ದೇವಸ್ಥಾನದ ಸಮಿತಿ ಸದಸ್ಯರಾದ ರಾಘವೇಂದ್ರ, ನಟರಾಜ್ ಆಚಾರ್, ನಟರಾಜ್ ಇತರರಿದ್ದರು.