

ಹೊಳಲ್ಕೆರೆ: ವಸತಿ ನಿಲಯದಲ್ಲಿ ತಬ್ಲಿಘಿಗಳ ಕ್ವಾರಂಟೈನ್ ಮಾಡಿರುವ ಜಿಲ್ಲಾಡಳಿತದ ಕ್ರಮವನ್ನು ಸಾರ್ವಜನಿಕರು ಖಂಡಿಸಿದ್ದಾರೆ. ತಕ್ಷಣವೇ ಅವರನ್ನು ಮಾತೃ ತಾಲೂಕುಗಳಿಗೆ ಕಳುಹಿಸಿಕೊಡಿ ಎಂದು ಆಗ್ರಹಿಸಿದ್ದಾರೆ.
ವಕೀಲರ ಸಂಘದ ಸದಸ್ಯರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ, ವಕೀಲರ ಸಂಘದ ತಾಲೂಕಾಧ್ಯಕ್ಷ ಜಿ.ಈ.ರಂಗಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯರಾದ ಬಿ.ಎಸ್.ರುದ್ರಪ್ಪ, ವಿಜಯ್, ವಕೀಲರಾದ ಎಸ್.ವೇದಮೂರ್ತಿ, ಬಿ.ಎನ್.ಪ್ರಶಾಂತ್, ಕೆ.ಎಸ್.ಜಯದೇವ್, ಬಸವರಾಜ್, ಪಿ.ನಂಜುಂಡಪ್ಪ, ಶಶಿಧರ್, ರವಿ, ವೆಂಕಟೇಶ್, ವರ್ತಕರ ಸಂಘದ ಚೇತನ್, ಎಂ.ಎಲ್.ನಾಗರಾಜ್, ಆರ್.ಐ.ಪ್ರಶಾಂತ್ ಮತ್ತಿತರರು ಇದ್ದರು.