

ಹೊಳಲ್ಕೆರೆ: ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿದರಷ್ಟೇ ಸಾಲದು, ಪದೇ ಪದೆ ಶಾಲೆಗೆ ಭೇಟಿ ನೀಡಿ ಅವರ ಪ್ರಗತಿ ಮಾಹಿತಿ ಪಡೆಯಬೇಕು ಎಂದು ವಕೀಲ ಜುಲ್ಫಿಕರ್ ಹೇಳಿದರು.
ಇಲ್ಲಿನ ಅಂಬೇಡ್ಕರ್ ಬಯಲು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಪಾಲಕರು ಖಾಸಗಿ ಶಾಲೆಗಳ ಮೇಲಿರುವ ವ್ಯಾಮೋಹ ಬಿಡಬೇಕು. ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಕರಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದರು.
ವಕೀಲ ಬುರ್‌ಹಾನ್ ಬೇಗ್, ಮುಖಂಡರಾದ ಅಲೀಮ್ ಉಲ್ಲಾ ಷರೀಫ್, ಇಲಿಯಾಸ್ ಖಾನ್, ಅಲ್ತಾಫ್ ಹುಸೇನ್ ಬೇಗ್,ಫಿರೋಜ್ ಖಲೀಲ್, ಪಪಂ ಸದಸ್ಯರಾದ ಸಜೀಲ್, ಮನ್ಸೂರ್ ಅಲಿ, ಮಾಜಿ ಸದಸ್ಯ ಹಬೀಬ್ ಉರ್ ರಹಮಾನ್, ಇಸಿಒ ಜಾಕೀರ್ ಉಲ್ಲಾ, ಮುಖ್ಯಶಿಕ್ಷಕರ ಸಂಘದ ಗೌರವಾಧ್ಯಕ್ಷ ಟಿ.ವರದರಾಜ, ಮುಖ್ಯಶಿಕ್ಷಕ ಟಿ.ರುದ್ರಸ್ವಾಮಿ ಇದ್ದರು.