

ಹೊಳಲ್ಕೆರೆ: ಸಿದ್ಧರಾಮರು ವಚನಗಳ ಮೂಲಕ ಸಂಜೀವಿನಿಯಾಗಿ, ಮಾರ್ಗದರ್ಶಕರಾಗಿದ್ದರು ಎಂದು ತಹಸೀಲ್ದಾರ್ ಕೆ.ನಾಗರಾಜ್ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ತಾಲೂಕು ಆಡಳಿತ ಏರ್ಪಡಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಮಾತನಾಡಿದರು.
ಸಿದ್ಧರಾಮೇಶ್ವರರು ರಚಿಸಿದ ವಚನಗಳು ಸಮಾಜಕ್ಕೆ ದಾರಿದೀಪವಾಗಿದ್ದವು. ರಾಜ್ಯ ಹಾಗೂ ಆಂಧ್ರದಲ್ಲಿ ಸಿದ್ಧರಾಮರು ದೇಗುಲ, ಕೆರೆ ನಿರ್ಮಾಣ ಮಾಡಿ, ದೀನ ದಲಿತರ ಕಣ್ಣೀರು ಒರೆಸುವ ಕಾರ್ಯ ಮಾಡಿದರು ಎಂದರು.
ಶತಮಾನಗಳಿಂದಲೂ ಬೋವಿ ಸಮುದಾಯದವರು ಶೋಷಿತರಾಗಿ ಬದುಕುತ್ತಿದ್ದಾರೆ. ಕಷ್ಟ ಜೀವಿಗಳಾದ ನೀವು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಗಳಾಗಿ ರೂಪಿಸುವತ್ತ ಚಿಂತಿಸಬೇಕು ಎಂದು ಸಲಹೆ ನೀಡಿದರು. ಬಿಇಒ ಜಗದೀಶ್ವರ್, ಟಿಎಚ್‌ಒ ಡಾ.ಜಯಸಿಂಹ ಇತರರು ಇದ್ದರು.