ಜನರ ಸಮಸ್ಯೆ ಆಲಿಸಲು ಹಳ್ಳಿಗಳಿಗೆ ಭೇಟಿ

CHANDRAPPA M
Published on

ಹೊಳಲ್ಕೆರೆ: ಲಾಕ್‌ಡೌನ್ ಕಾರಣ ಜನ ಸಂಕಷ್ಟದಲ್ಲಿದ್ದು, ಅವರಿಗೆ ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಹಳ್ಳಿಗಳಿಗೂ ತೆರಳುತ್ತಿದ್ದೇನೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಲಾಕ್‌ಡೌನ್ ಕ್ರಮ ಸರಿಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ತೀರ ಕೆಳಮಟ್ಟದಲ್ಲಿದೆ ಎಂದರು.

ಲಾಕ್‌ಡೌನ್‌ನಿಂದ ನಮಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಬಹುತೇಕರು ಹೇಳಿಕೊಂಡಿದ್ದಾರೆ. ಕೆಲ ಹಳ್ಳಿಗಳಲ್ಲಿ ಮಾತ್ರ ಒಂದಿಬ್ಬರಿಗೆ ಪಡಿತರ ವಿತರಣೆ ಸಮಸ್ಯೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು.

ರಾಮಗಿರಿ ಹೋಬಳಿ, ಮದ್ದೇರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲದೆ, ತಾಲೂಕಿನ ಮಲಸಿಂಗನಹಳ್ಳಿ ದಾಸಯ್ಯನಹಟ್ಟಿ, ಎಮ್ಮಿಗನೂರು, ವೆಂಕಟೇಶ್ ಪುರ ಮುಂತಾದ ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆ ಆಲಿಸಿದ್ದೇನೆ. ಬುಧವಾರ ತಾಳ್ಯ ಹೋಬಳಿ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಲಾಗುವುದು ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಎಲ್.ಬಿ.ರಾಜಶೇಖರ್, ಪಪಂ ಸದಸ್ಯ ಮುರುಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net