ಕುರಿ, ಮೇಕೆ ಸಂತೆ ಮಾರುಕಟ್ಟೆಗೆ ಸೂಕ್ತ ವ್ಯವಸ್ಥೆ

HLK KURI SANTE 14
Published on

ಹೊಳಲ್ಕೆರೆ: ಲಾಕ್‌ಡೌನ್ ತೆರವಿನ ನಂತರ ಪಟ್ಟಣದಲ್ಲಿ ಪ್ರತಿ ಮಂಗಳವಾರ ಕುರಿ, ಮೇಕೆ ಸಂತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಪಟ್ಟಣದಲ್ಲಿ ಸಂತೆ ಮಾರುಕಟ್ಟೆಗೆ ಸ್ಥಳ ಗುರುತಿಸಿ ಮಂಗಳವಾರ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುರಸಭೆ ಸ್ಥಾಪನೆಯಾಗಿ ಏಳು ದಶಕ ಕಳೆದರೂ ಕುರಿ ಸಂತೆಗೆ ಸೂಕ್ತ ಸ್ಥಳವಿರಲಿಲ್ಲ. ಇದರಿಂದ ಪ್ರತಿ ಭಾನುವಾರ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂತೆ ಸ್ಥಳಾಂತರವಾಗುತ್ತಿತ್ತು. ಈಗ ಅಧಿಕೃತ ಸ್ಥಳ ಗುರುತಿಸಲಾಗಿದ್ದು, ಅಭಿವೃದ್ಧಿಪಡಿಸಲಾಗುವುದು ಎಂದರು.

ತಾಲೂಕಿನ ರೈತರು ಕುರಿ, ಮೇಕೆ ಮಾರಾಟ ಮಾಡಲು ಚಿತ್ರದುರ್ಗ, ಹೊಸದುರ್ಗ ಸಂತೆಗಳಿಗೆ ಹೋಗಬೇಕಿತ್ತು. 4 ಎಕರೆ ಪ್ರದೇಶದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸುವುದರಿಂದ ಸಮಸ್ಯೆ ತಪ್ಪಲಿದೆ ಎಂದರು.

ತಹಸೀಲ್ದಾರ್ ಕೆ.ನಾಗರಾಜ್, ಪಪಂ ಮುಖ್ಯಾಧಿಕಾರಿ ಎ.ವಾಸಿಂ, ಸದಸ್ಯರಾದ ಕೆ.ಸಿ.ರಮೇಶ್, ಪಿ.ಎಚ್.ಮುರುಗೇಶ್, ಆರ್.ಅಶೋಕ, ಮಲ್ಲಿಕಾರ್ಜುನ, ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಸಿದ್ದೇಶ್, ಮಹಿಳಾ ಮೋರ್ಚಾದ ಕಾರ್ಯದರ್ಶಿ ರೂಪಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net