21 ತಬ್ಲಿಘಿಗಳ ಬಿಡುಗಡೆ

HLK MUSLIM 22
Published on

ಹೊಳಲ್ಕೆರೆ: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದ್ದ 21 ತಬ್ಲಿಘಿಗಳನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.

ತಬ್ಲಿಘ್ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿ ಮರಳಿದ್ದ ಚಿತ್ರದುರ್ಗ, ದಾವಣಗೆರೆ ತಾಲೂಕಿನ 21 ಜನರನ್ನು ಪಟ್ಟಣದ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಇವರ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಿದ್ದು, ಸೋಂಕು ಪತ್ತೆಯಾಗಿಲ್ಲ. 14 ದಿನ ಕ್ವಾರಂಟೈನ್ ಪೂರೈಸಿದ ಬಳಿಕ 21 ಜನರನ್ನು ಬಿಡುಗಡೆ ಮಾಡಲಾಯಿತು.

ತಹಸೀಲ್ದಾರ್ ಕೆ.ನಾಗರಾಜ್ ಮಾತನಾಡಿ, ಜಿಲ್ಲಾಡಳಿತದ ಆದೇಶದಂತೆ ತಬ್ಲಿಘಿಗಳಿಗೆ ಕ್ವಾರಂಟೈನ್ ಮಾಡಲಾಗಿತ್ತು. ಅವರೆಲ್ಲರೂ ಆರೋಗ್ಯ ಪೂರ್ಣವಾಗಿದ್ದಾರೆ ಎಂದು ತಿಳಿಸಿದರು.

ಟಿಎಚ್‌ಒ ಡಾ.ಜಯಸಿಂಹ, ಪಪಂ ಮಾಜಿ ಸದಸ್ಯ ಹಬೀಬ್‌ವುರ್ ರಹಮಾನ್ ಮಾತನಾಡಿದರು. ಮುಖ್ಯಾಧಿಕಾರಿ ಎ.ವಾಸಿಂ, ಡಾ.ಉಷಾ, ಡಾ.ಆನಂದ್, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್, ಪಿಎಸ್‌ಐ ಡಿ.ಸಿ.ಸ್ವಾತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net