ಮೂರನೇ ಸ್ಥಾನಕ್ಕೆ ಬರದಂತೆ ತಡೆಗಟ್ಟಿ

HLK SP 19
Published on

ಹೊಳಲ್ಕೆರೆ: ಭಾರತದಲ್ಲಿ ಕರೊನಾ ವೈರಸ್ ಎರಡನೇ ಸ್ಥಾನದಲ್ಲಿದೆ. ಇದು ಮೂರನೇ ಸ್ಥಾನಕ್ಕೇರದ ಹಾಗೆ ತಡೆಗಟ್ಟಲು ಎಲ್ಲರೂ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಹೆಚ್ಚುವರಿ ಎಸ್.ಪಿ.ನಂದಗಾವಿ ಮನವಿ ಮಾಡಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಕರೊನಾ ವೈರಸ್ ಮುಂಜಾಗ್ರತೆ ಪ್ರಾತ್ಯಕ್ಷಿಕೆ ತೋರಿಸಿ ಮಾತನಾಡಿದರು.

ಸೀನು, ಕೆಮ್ಮುವುದರಿಂದ ಸೋಂಕು ಇನ್ನೊಬ್ಬರಿಗೆ ಹರಡುತ್ತದೆ. ಆದರೆ, ಯಾರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅಂತವರಿಗೆ ಸೋಂಕು ಬೇಗ ತಗುಲುತ್ತದೆ ಎಂದರು.

ವಿದೇಶದಿಂದ ಬರುವವರನ್ನು 14 ದಿನಗಳ ಕಾಲ ಐಸೊಲೇಷನ್‌ನಲ್ಲಿರಿಸಿ ಸೋಂಕು ಇಲ್ಲವೆಂದು ದೃಢವಾದ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗುತ್ತದೆ. ಹೋಟೆಲ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಗುಂಪಾಗಿ ನಿಲ್ಲಬಾರದು ಎಂದು ಸಲಹೆ ನೀಡಿದರು.

ಪೊಲೀಸರಿಗೂ ಮಾಸ್ಕ್ ವಿತರಿಸಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಾನಂದ, ಶುಚಿತ್ವ ಮತ್ತು ಕರೊನಾ ವೈರಸ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಡಿವೈಎಸ್‌ಪಿ ಪಾಂಡುರಂಗಸ್ವಾಮಿ, ಸಿಪಿಐ ರವೀಶ್, ಪಿಎಸ್‌ಐ ಸ್ವಾತಿ, ಇಒ ತಾರಾನಾಥ್, ಪಪಂ ಮುಖ್ಯಾಧಿಕಾರಿ ವಾಸೀಂ, ಡಾ. ಆನಂದ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net