ದೇಶದ ಸಂವಿಧಾನ ವಿಶ್ವಕ್ಕೆ ಮಾದರಿ

HLK JANUARY 26
Published on

ಹೊಳಲ್ಕೆರೆ: ದೇಶದ 130 ಕೋಟಿ ಜನರಿಗೆ ಸಮಾನತೆ ಮತ್ತು ಮೂಲ ಹಕ್ಕು ಕಲ್ಪಿಸಿರುವ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಪಟ್ಟಣದ ಕೊಟ್ರೆ ನಂಜಪ್ಪ ಪದವಿಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಾತಂತ್ರೃ ಪೂರ್ವದಲ್ಲಿ ಬ್ರಿಟಿಷರ ದಬ್ಬಾಳಿಕೆಯಿಂದ ದೇಶ ಬಡತನಕ್ಕೆ ಸಿಲುಕಿತ್ತು.ದಬ್ಬಾಳಿಕೆ ಮತ್ತು ಗುಲಾಮಗಿರಿಯಿಂದ ಮುಕ್ತಿ ಪಡೆಯಲು ಹಲವು ಮಹನೀಯರು ಹೋರಾಟ ಮಾಡಿದರು. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.

ಕಾರ್ಯಕ್ರಮಕ್ಕೂ ಮೊದಲು ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್, ಜವಾಹರ್‌ಲಾಲ್ ನೆಹರು ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು. ತಹಸೀಲ್ದಾರ್ ಕೆ.ನಾಗರಾಜ್, ತಾಪಂ ಇಒ ತಾರಾನಾಥ್, ಬಿಇಒ ಜಗದೀಶ್ವರ್ ಇದ್ದರು.

ಗುರುವಿಗೆ ಗುರುದಕ್ಷಿಣೆ ನೀಡಿದ ಶಾಸಕ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರಿಗೆ ಶಾಸಕ ಎಂ.ಚಂದ್ರಪ್ಪ 50 ಸಾವಿರ ರೂ. ಗುರು ದಕ್ಷಿಣೆ ನೀಡಿ ನಮಿಸಿದರು. ಈ ವೇಳೆ ಮಾತನಾಡಿದ ರಾಜಶೇಖರಪ್ಪ, ಶಾಸಕರು ನನ್ನ ವಿದ್ಯಾರ್ಥಿಯಾಗಿದ್ದರು. ನನ್ನ ಮೇಲೆ ಪ್ರೀತಿ ತೋರಿಸಿ ನೀಡಿದ ಹಣವನ್ನು ಸಂಶೋಧನ ಪುಸ್ತಕಗಳ ಬಿಡುಗಡೆಗೆ ಬಳಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net