ಹೊನ್ನೆಕೆರೆ ಅಭಿವೃದ್ಧಿಗೆ 1 ಕೋಟಿ ರೂ.

HLK MLA 23
Published on

ಹೊಳಲ್ಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಹೊನ್ನೆಕೆರೆ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಕೆರೆ ಅಭಿವೃದ್ಧಿ ಕಾಮಗಾರಿ ಶನಿವಾರ ಪರಿಶೀಲಿಸಿ ಮಾತನಾಡಿ, ತಾಲೂಕಿನಲ್ಲಿರುವ 83 ಕೆರೆಗಳ ಅಭಿವೃದ್ಧಿಪಡಿಸಿ ನೀರು ತುಂಬಿಸುವ ಉದ್ದೇಶದಿಂದ ಕೆರೆಗಳಿಗೆ 1ರಿಂದ 3 ಕೋಟಿ ರೂ. ವರೆಗೆ ಅನುದಾನ ನೀಡಲಾಗಿದೆ ಎಂದರು.

ಕೆರೆಯಲ್ಲಿರುವ ಜಾಲಿ ಗಿಡಗಳ ತೆರವು, ಹೂಳು ತೆಗೆಯುವುದು, ಕೋಡಿಗಳ ದುರಸ್ತಿ, ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಕೆರೆಗಳಲ್ಲಿ ನೀರು ಸಂಗ್ರಹವಾಗುವುದರಿಂದ ಕ್ಷೇತ್ರದಲ್ಲಿರುವ ತೋಟಗಾರಿಕೆ ಕೃಷಿಗೆ ಹೆಚ್ಚಿನ ಶಕ್ತಿ ಬರಲಿದೆ ಎಂದು ತಿಳಿಸಿದರು.

ಪಪಂ ಸದಸ್ಯರಾದ ಕೆ.ಸಿ.ರಮೇಶ್, ಪಿ.ಆರ್.ಮಲ್ಲಿಕಾರ್ಜುನ್, ಸುಧಾ ಬಸವರಾಜ್, ವಕೀಲ ಎಸ್.ವೇದಮೂರ್ತಿ, ಮಾಜಿ ಸದಸ್ಯ ಎಸ್.ಬಿ.ಶಿವರುದ್ರಪ್ಪ, ಶಿಕ್ಷಕ ಕಾಂತರಾಜ್, ಗುತ್ತಿಗೆದಾರ ಪ್ರವೀಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net