ಸದೃಢ ದೇಹ, ಮನಸ್ಸು ಮುಖ್ಯ

HLK HEART 14
Published on

ಹೊಳಲ್ಕೆರೆ: ಬದುಕು ಯಶಸ್ವಿಯಾಗಬೇಕಾದರೆ ಸದೃಢ ದೇಹ, ಮನಸ್ಸು ಅಗತ್ಯ ಎಂದು ಡಾ.ಪ್ರೀತಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಆಯೋಜಿಸಿದ್ದ ಹೃದಯ ಮತ್ತು ನರರೋಗ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಈಚೆಗೆ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಜಾಸ್ತಿಯಾಗುತ್ತಿವೆ. ಇದಕ್ಕೆ ಕಾರಣ ದೈಹಿಕ ಶ್ರಮ ಕಡಿಮೆಯಾಗುತ್ತಿರುವುದು ಎಂದರು.

ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕೃಷ್ಣಮೂರ್ತಿ ಮಾತನಾಡಿ, ನಮ್ಮೆಲ್ಲರ ಆರೋಗ್ಯದ ಕಾಳಜಿಗೆ ಸ್ಪಂದಿಸುತ್ತಿರುವ ರೆಡ್‌ಕ್ರಾಸ್ ಸಂಸ್ಥೆ ಸ್ಮರಣೀಯ ಎಂದಿ ತಿಳಿಸಿದರು.

ಶಿಬಿರದಲ್ಲಿ 198 ಜನರು ತಪಾಸಣೆ ಮಾಡಿಸಿಕೊಂಡಿದ್ದು, 23 ಜನರಿಗೆ ಹೆಚ್ಚಿನ ತಪಾಸಣೆಗೆ ಸೂಚಿಸಲಾಯಿತು. ಡಾ.ನವೀನ್, ಡಾ.ರುದ್ರಪ್ಪ, ಸಿಪಿಐ ವೀರೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net