ಹೊಳಲ್ಕೆರೆಯಲ್ಲಿ 21 ತಬ್ಲಿಘಿಗಳ ಕ್ವಾರಂಟೈನ್

HLK TABLIG 09 (4)
Published on

ಹೊಳಲ್ಕೆರೆ: ಗುಜರಾತ್‌ನಿಂದ ಬಂದ 21 ಜನ ತಬ್ಲಿಘಿಗಳನ್ನು ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಕೆ.ನಾಗರಾಜ್ ತಿಳಿಸಿದ್ದಾರೆ.

ಚಿತ್ರದುರ್ಗ ಮತ್ತು ದಾವಣಗೆರೆ ತಾಲೂಕಿಗೆ ಸೇರಿದ ತಬ್ಲಿಘಿಗಳು ಗುಜರಾತ್‌ನಲ್ಲಿ ಧರ್ಮಸಭೆ ಮುಗಿಸಿಕೊಂಡು ಅಥಣಿ ಮಾರ್ಗವಾಗಿ ಹೊಳಲ್ಕೆರೆಗೆ ಆಗಮಿಸಿದ್ದಾರೆ. ಅವರ ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ವಸತಿ ಶಾಲೆಯ ಸುತ್ತಲು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 5 ಕೊಠಡಿಯಲ್ಲಿ ತಲಾ ನಾಲ್ಕು ಜನರಂತೆ ವಾಸಿಸಲು ಸೌಲಭ್ಯ ಕಲ್ಪಿಸಲಾಗಿದೆ. ನಿತ್ಯ ವೈದ್ಯಕೀಯ ತಪಾಸಣೆಗೆ ವಿಶೇಷ ಆರೋಗ್ಯ ಸೇವಾ ತಂಡವನ್ನು ನಿಯೋಜಿಸಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net