ಮೆಕ್ಕೆಜೋಳ ಖರೀದಿಗೆ ಹಣ ಮೀಸಲು

HLK VITARANE 04
Published on

ಹೊಳಲ್ಕೆರೆ: ಮೆಕ್ಕೆಜೋಳ ಬೆಳೆದ ರೈತರಿಗೆ ನೆರವು ನೀಡಲು 660 ಕೋಟಿ ರೂ. ಅನುದಾನ ರಾಜ್ಯ ಸರ್ಕಾರ ಮಿಸಲು ಮಾಡಿದ್ದು, ಬೆಂಬಲ ಬೆಲೆ ಜತೆ ಮೆಕ್ಕೆಜೋಳ ಬೆಳೆದ ರೈತರಿಗೆ ತಲಾ 5000 ರೂ. ಹಣವನ್ನು ನೀಡಲಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಪಟ್ಟಣ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ವಿತರಿಸಿ ಮಾಡಿ ಮಾತನಾಡಿದರು.

ಕೋವಿಡ್-19 ಸಂಕಷ್ಟ ಇದ್ದರೂ ಕೇಂದ್ರ ಸರ್ಕಾರ ದೇಶದ 110 ಕೋಟಿ ಜನರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ ಎಂದರು.

ಕೇಂದ್ರ ಸರ್ಕಾರ ಅಟಲ್ ಭೂ ಜಲ ಯೋಜನೆಗೆ ಹೊಳಲ್ಕೆರೆ ತಾಲೂಕು ಸೇರ್ಪಡೆಯಾಗಿದೆ. ಇದರಿಂದ ಜಲಸಂರಕ್ಷಣೆ ಸೇರಿ ವಿವಿಧ ಸೌಲಭ್ಯಗಳು ಜನತೆಗೆ ಲಭಿಸಲಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸಲು, ಪಪಂ ಸದಸ್ಯರಾದ ಕೆ.ಸಿ.ರಮೇಶ್, ಪಿ.ಆರ್.ಮಲ್ಲಿಕಾರ್ಜುನಸ್ವಾಮಿ, ಬಸವರಾಜ್ ಯಾದವ್, ಮುರುಗೇಶ್ ಮತ್ತೀತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net