ಶಾಸಕ ಸ್ಥಾನ ಜನ ಸೇವೆಗೆ ಮುಡಿಪು

HLK GUDALI POOJE -01
Published on

ಹೊಳಲ್ಕೆರೆ: ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹಣ ನೀಡುವ ಜನರ ಒಂದೊಂದು ರೂಪಾಯಿಗೂ ನ್ಯಾಯ ಒದಗಿಸುವುದೇ ನನ್ನ ಪರಮ ಗುರಿ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಪಟ್ಟಣದ ಸದ್ಗುರು ಸೇವಾಶ್ರಮದ ಬಳಿ ಭಾನುವಾರ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಜನರಿಂದ ದೊರೆತ ಶಾಸಕ ಸ್ಥಾನ ಅವರ ಸೇವೆಗಾಗಿಯೇ ಮುಡುಪಿಡುವೆ ಎಂದರು ಹೇಳಿದರು.

ತಲಾ 50 ಲಕ್ಷ ರೂ. ವೆಚ್ಚದಲ್ಲಿ ಗಣಪತಿ ದೇವಸ್ಥಾನದಿಂದ ಪಿ.ಎಲ್.ಡಿ. ಬ್ಯಾಂಕ್ ಹಾಗೂ ಪಟ್ಟಣದಿಂದ ಚೀರನಹಳ್ಳಿಯ ಎಸ್.ಸಿ.ಕಾಲನಿ ವರೆಗೆ ಸಿಸಿ ರಸ್ತೆ, 30 ಲಕ್ಷ ರೂ. ವೆಚ್ಚದಲ್ಲಿ ಗಣಪತಿ ದೇವಸ್ಥಾನದಿಂದ ಚೀರನಹಳ್ಳಿಯ ಹರಿಜನ ಕಾಲನಿವರೆಗೆ ರಸ್ತೆ ಅಭಿವೃದ್ಧಿಗೊಳಿಸಲು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ಗಣಪತಿ ರಸ್ತೆಯ ಚರಂಡಿ ನಿರ್ಮಾಣಕ್ಕೆ 1 ಕೋಟಿ ರೂ. ಮಂಜೂರಾಗಿದೆ. ಈಗಾಗಲೇ ಟೆಂಡರ್ ಕರೆದಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ವಾಹನ ನಿಲುಗಡೆಗಾಗಿ ತಲಾ 1 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಪಟ್ಟಣ ಪಂಚಾಯಿತಿ ಬಳಿ ಸುಸಜ್ಜಿತ ಸೆಲ್ಲರ್ ನಿರ್ಮಾಣ ಮಾಡಲಾಗುವುದು ಎಂದರು.

ಬಳಿಕ ಪಟ್ಟಣದ ದೊಡ್ಡ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದರು. ಪಪಂ ಸದಸ್ಯರಾದ ಮಲ್ಲಿಕಾರ್ಜುನ, ಕೆ.ಸಿ.ರಮೇಶ್, ವಿಜಯ್ ಕುಮಾರ್, ಮುರುಗೇಶ್, ಅಶೋಕ, ನಾಗರತ್ನ, ಮುಖಂಡರಾದ ಚನ್ನಬಸಪ್ಪ, ಜಯಣ್ಣ, ಪಪಂ ಮುಖ್ಯಾಧಿಕಾರಿ ಎ. ವಾಸೀಂ, ಪಿಡಬ್ಲ್ಯುಡಿ ಎಇಇ ಮಹಾಬಲೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net