ಕಣ್ಣಿನ ರಕ್ಷಣೆ ಎಲ್ಲರ ಆದ್ಯತೆಯಾಗಲಿ

HLK NETRA TAPASANE 18
Published on

ಹೊಳಲ್ಕೆರೆ: ಕಣ್ಣು ಸೂಕ್ಷ್ಮ ಅಂಗವಾಗಿದ್ದು ಅದರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ. ಅಂಕುಶ್ ಹೇಳಿದರು.

ಪಟ್ಟಣದ ಟಿಪಿಸಿಕೆ ಬಾಲಿಕಾ ಪ್ರಾಢಶಾಲೆಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ 115 ನೇ ಸಂಸ್ಥಾಪನಾ ದಿನ ಹಾಗೂ ಜಿನೈಕ್ಯ ಎಚ್.ಪಿ. ಸುಮಾಲಿನಿ, ಎಚ್. ಪಾರ್ಶ್ವನಾಥಯ್ಯ ಸ್ಮರಣಾರ್ಥ ಸಾರ್ವಜನಿಕ ಆಸ್ಪತ್ರೆ ಹಾಗೂ ಶಿವಮೊಗ್ಗ ಶಂಕಿತ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಡೆದ ನೇತ್ರ ಪರೀಕ್ಷೆ ಹಾಗೂ ಶಸ್ತ್ರ ಚಿಕಿತ್ಸೆ ಉಚಿತ ಶಿಬಿರದಲ್ಲಿ ಮಾತನಾಡಿದರು.

ಆರೋಗ್ಯ ಶುದ್ಧವಿದ್ದರೆ ಎಲ್ಲ ಕಾರ್ಯಗಳು ಸಾಧ್ಯವಾಗುತ್ತವೆ. ಇದೇ ರೀತಿ ಕಣ್ಣಿನ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಏನೇ ತೊಂದರೆ ಇದ್ದರೂ ತಕ್ಷಣ ನೇತ್ರ ತಜ್ಞರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಆಸ್ಪತ್ರೆ ಸಹಯೋಗದಲ್ಲಿ ಈವರೆಗೆ 50 ಕ್ಕೂ ಅಧಿಕ ಕಡೆ ಕಣ್ಣು ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸೆ ಉಚಿತ ಶಿಬಿರ ನಡೆಸಿ ಸಾವಿರಾರು ಜನರ ದೃಷ್ಟಿ ದೋಷ ನಿವಾರಿಸಲಾಗಿದೆ ಎಂದರು.

ಶಿಬಿರದಲ್ಲಿ 128 ಜನರ ಕಣ್ಣಿನ ತಪಾಸಣೆ ನಡೆಸಲಾಯಿತು. 86 ಜನ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದು, ಇವರನ್ನು ಆಸ್ಪತ್ರೆಯ ಬಸ್ಸಿನಲ್ಲೇ ಶಿವಮೊಗ್ಗಕ್ಕೆ ಕರೆದೊಯ್ದು ಶಸ್ತ್ರಚಿಕಿತ್ಸೆ ನಡೆಸಿ ಮರಳಿ ಕಳಿಸಲಾಗುವುದು ಎಂದು ತಿಳಿಸಿದರು.

ರೋಟರಿ ಅಧ್ಯಕ್ಷ ಜಿ.ಪಿ. ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಕೆ.ಎಸ್. ತಿಪ್ಪೇಸ್ವಾಮಿ, ಎಸ್.ಪಿ. ರವಿಕುಮಾರ್, ಎಲ್. ರುದ್ರಪ್ಪ, ಶಿಬಿರದ ಕೋ-ಆರ್ಡಿನೇಟರ್ ರವಿಕುಮಾರ್. ನೇತ್ರಾಧಿಕಾರಿಗಳಾದ ಧನಂಜಯಮೂರ್ತಿ, ಡಿ. ಪ್ರಸಾದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net