ಮಾ.7ಕ್ಕೆ ತಾಳಕಟ್ಟ ಕರಿಯಮ್ಮ ಜಾತ್ರೆ

HLK TALAKATTA 13
Published on

ಹೊಳಲ್ಕೆರೆ: ತಾಲೂಕಿನ ತಾಳಕಟ್ಟ ಗ್ರಾಮದ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವವನ್ನು ಮಾ.7ರಿಂದ 15ರ ವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಗುಡಿಗೌಡ್ರು ಟಿ.ಸಿ.ಜಯಣ್ಣ ತಿಳಿಸಿದರು.

ಗ್ರಾಮದ ಕರಿಯಮ್ಮ ದೇವಿ ಸಮುದಾಯ ಭವನದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮಾ.14ಕ್ಕೆ ರಥೋತ್ಸವ: 7ರ ರಾತ್ರಿ ಅಮ್ಮನವರನ್ನು ಗಂಗಸಮುದ್ರ-ಗೌಡಿಹಳ್ಳಿಗೆ ಕರೆದೊಯ್ಯುವುದು. 8ಕ್ಕೆ ಗೌಡಿಹಳ್ಳಿಯಲ್ಲಿ ಮದುವಣ ಗಿತ್ತಿಶಾಸ್ತ್ರ, 9ರ ಬೆಳಗ್ಗೆ 6ಕ್ಕೆ ದೇವರ ಸೇವೆ ಕಾರ್ಯ, 10ರ ರಾತ್ರಿ 10 ಗಂಟೆಗೆ ಬೇವಿನ ಸೀರೆ ಉತ್ಸವ, 11ಕ್ಕೆ ಕೋಣನ ಉತ್ಸವ, 12ರಂದು ಆನೆ, ಕುದುರೆ ಉತ್ಸವ, 13ರ ಮುಂಜಾನೆ 2.30ಕ್ಕೆ ಕೆಂಡಾರ್ಚನೆ, ರಾತ್ರಿ 10ಕ್ಕೆ ಭಂಡಾರ ತಣಿಗೆ ಉತ್ಸವ, 14ರ ಬೆಳಗ್ಗೆ 10ಕ್ಕೆ ಅಮ್ಮನವರ ರಥೋತ್ಸವ, ಸಂಜೆ 4ಕ್ಕೆ ಸಿಡಿ ಉತ್ಸವ, ಕೊನೆಯ ದಿನವಾದ 15ರ ಸಂಜೆ 3 ಗಂಟೆಗೆ ದೊಡ್ಡೆಡೆ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ ಎಂದು ತಿಳಿಸಿದರು.

ಗುಡಿಗೌಡ್ರು ನಾಗಭೂಷಣ್, ಟಿ.ಕೆ.ರಾಜಪ್ಪ, ಟಿ.ವಿ.ಮೋಹನ್‌ಕುಮಾರ್, ನಾಗೇಶಪ್ಪ, ಮಹೇಶ್ವರಪ್ಪ, ಟಿ.ಕೆ.ದೊಡ್ಡಪ್ಪ, ಜಗದೀಶ್ವರಪ್ಪ, ಟಿ.ಕೆ.ಪರಮೇಶ್ವರಪ್ಪ, ಟಿ.ಆರ್.ಹಾಲೇಶಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net