ಪೌರಕಾರ್ಮಿಕರ ಸೇವೆ ಸ್ಮರಣಾರ್ಹ

HLK VITARANE 05
Published on

ಹೊಳಲ್ಕೆರೆ: ಕರೊನಾ ವೈರಸ್ ತಡೆಯುವಲ್ಲಿ ಪೌರಕಾರ್ಮಿಕರ ಪರಿಶ್ರಮ ಸಾಕಷ್ಟಿದೆ. ಇವರ ಸೇವೆಯನ್ನು ಎಲ್ಲರೂ ಸ್ಮರಿಸಬೇಕು ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ಪಪಂ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಬೆಳಗಿನ ತಿಂಡಿ ಕೂಟದಲ್ಲಿ ಪೌರಕಾರ್ಮಿಕರಿಗೆ ಉಪಹಾರದ ಪ್ಯಾಕೆಟ್ ವಿತರಿಸಿ ಮಾತನಾಡಿದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುತೇಕ ಸರ್ಕಾರಿ ನೌಕರರು ಮನೆಯಲ್ಲಿದ್ದರೆ ಪೌರಕಾರ್ಮಿಕರು, ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರ ಹಗಲಿರುಳೆನ್ನದೆ ಕೋವಿಡ್-19 ವಿರುದ್ಧ ಹೋರಾಟ ನಡೆಸಿದೆ. ಇವರ ಸೇವೆ ಅಗಾದವಾದುದು ಎಂದರು.

ಪಪಂ ಸದಸ್ಯರಾದ ಅಶೋಕ್, ವಿಜಯ್, ಮುರುಗೇಶ್, ಬಸವರಾಜ್ ಯಾದವ್, ಕೆ.ಸಿ. ರಮೇಶ್, ವಕೀಲರ ಎಸ್. ವೇದಮೂರ್ತಿ, ಮುಖ್ಯಾಧಿಕಾರಿ ಎ. ವಾಸಿಂ, ಆರೋಗ್ಯಾಧಿಕಾರಿ ಪರಮೇಶ್ವರಪ್ಪ, ಕುಮಾರ್, ಕಿಶೋರ್, ನೌಶಾದ್, ರವಿ, ರುದ್ರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net