ಹೊಳಲ್ಕೆರೆಯಲ್ಲಿ ಸ್ವಚ್ಛತೆ ಕಾರ್ಯ

HLK SWACHATE 14
Published on

ಹೊಳಲ್ಕೆರೆ: ಕರೊನಾ ಆತಂಕದ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಶನಿವಾರ ಪಪಂ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಬ್ಲೀಚಿಂಗ್ ಪೌಡರ್‌ನಿಂದ ಸ್ವಚ್ಛತೆ ಕಾರ್ಯ ಕೈಗೊಂಡರು.

ಇನ್ನು ಮುಂದೆ ಪ್ರತಿ ದಿನ ನಾಲ್ಕು ಬಾರಿ ನಿಲ್ದಾಣ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮುಖ್ಯಾಧಿಕಾರಿ ಎ.ವಾಸಿಂ ತಿಳಿಸಿದರು.

ಪಪಂ ಕಚೇರಿಯಲ್ಲಿ ಕೋಳಿ, ಕುರಿ-ಮಾಂಸ ಮಾರಾಟಗಾರರು ಹಾಗೂ ಹಂದಿ ಮಾಲೀಕರ ಸಭೆ ಕರೆದು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿವಳಿಕೆ ನೀಡಲಾಗಿದೆ ಎಂದು ಹೇಳಿದರು.

ಅಂಗಡಿಗಳಿಂದ ಬರುವ ತ್ಯಾಜ್ಯವನ್ನು ಪಟ್ಟಣದ ಹೊರಗೆ ನಿಗದಿತ ಸ್ಥಳಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net