ಪ್ರೊ.ಬಿ.ಕೆ.ಸ್ವಾಭಿಮಾನದ ಸಂಕೇತ

HLK BK 10
Published on

ಹೊಳಲ್ಕೆರೆ: ಶೋಷಿತ ಸಮುದಾಯಗಳ ಬದುಕಿನಲ್ಲಿ ಸ್ವಾಭಿಮಾನದ ಹಣತೆ ಹಚ್ಚಿದವರು ದಸಂಸ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಎಂದು ಸಮಿತಿಯ ಸಂಚಾಲಕ ಡಿ.ಆರ್.ಪಾಂಡುರಂಗಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದಿಂದ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟಿದ್ದ ಪ್ರೊ.ಬಿ.ಕೃಷ್ಣಪ್ಪ ಅವರು ಶೋಷಿತ ಸಮುದಾಯಗಳ ಪ್ರಗತಿಗೆ ಸಾಮಾಜಿಕ ಚಳವಳಿ ಕಟ್ಟಿ, ಸ್ವಾಭಿಮಾನದ ಸಂಕೇತವಾದರು ಎಂದು ಸ್ಮರಿಸಿದರು.

ಸಂಘಟನೆಯ ಸಂಚಾಲಕ ಕಸ್ತೂರಪ್ಪ , ತಾಲೂಕು ಅಧ್ಯಕ್ಷ ಮಂಜು ದಾಸಿಕಟ್ಟೆ, ಜಿಲ್ಲಾ ಸಂಘಟನಾ ಸಂಚಾಲಕ ಶಿವುಕುಮಾರ್ ರಂಗಾಪುರ, ರುದ್ರೇಶ್, ಕುಮಾರ್ ಬೊಮ್ಮನಕಟ್ಟೆ, ಸುಂದರಮೂರ್ತಿ, ಪಪಂ ಮಾಜಿ ಸದಸ್ಯ ರಾಜಪ್ಪ, ಹಾಲೇಶ್, ಪರಶುರಾಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net