

ಹೊಳಲ್ಕೆರೆ: ಎಚ್.ಡಿ.ಪುರ ಗ್ರಾಮದಲ್ಲಿ ಮಾ.2ರಂದು ಆರಂಭಗೊಂಡಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಬುಧವಾರ ಸಮಾಪನಗೊಂಡಿತು.
9ರಂದು ಬ್ರಹ್ಮರಥೋತ್ಸವ, 10-ರಥೋತ್ಸವ, ದೊಡ್ಡೆಡೆ ಸೇವೆ, ಭೂತ ಬಲಿ, ಧೂಳೋತ್ಸವ, ಬೆಳ್ಳಿ ಪಲ್ಲಕ್ಕಿ ಹಾಗೂ ಚೌಕಿ ಉತ್ಸವ ಅದ್ಧೂರಿಯಿಂದ ಜರುಗಿದ್ದವು. ಬ್ರಹ್ಮರಥೋತ್ಸವದಲ್ಲಂತೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದು ಸ್ವಾಮಿಯ ಮಹಿಮೆಗೆ ಸಾಕ್ಷಿ ಎನಿಸಿತು.
11ರಂದು ಬೆಳಗ್ಗೆ ಧ್ವಜಾರೋಹಣ, ನವಿಲೋತ್ಸವ ಹಾಗೂ ರಾತ್ರಿ ಹೂವಿನ ಪಲ್ಲಕ್ಕಿ ಮಹೋತ್ಸವ, ಪೀಠೋತ್ಸವ ಮೊದಲಾದ ಧಾರ್ಮಿಕ ಆಚರಣೆಗಳ ಬಳಿಕ ಶಯನೋತ್ಸವದೊಂದಿಗೆ ಜಾತ್ರೆ ಮುಕ್ತಾಯವಾಯಿತು.