ಪುಣಜೂರು ಕುಮಾರ ಎಪಿಎಂಸಿ ಅಧ್ಯಕ್ಷ

HLK APMC 20
Published on

ಹೊಳಲ್ಕೆರೆ: ತಾಲೂಕು ಕೃಷಿ ಉತ್ವನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾಗಿ ಪುಣಜೂರು ಕುಮಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೊಳಾಳ್ ರಾಮಣ್ಣ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಆಯ್ಕೆ ಪ್ರಕ್ರಿಯೆ ನಡೆಯಿತು. ಪುಣಜೂರು ಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಕೆ.ನಾಗರಾಜ್ ಘೋಷಿಸಿದರು.

ಮಾಜಿ ಅಧ್ಯಕ್ಷ ಡಿ.ಬಿ.ಕುಮಾರ್, ಮಾಜಿ ಉಪಾಧ್ಯಕ್ಷ ಮುತ್ತುಗದೂರು ಪುರದಪ್ಪ, ಸದಸ್ಯರಾದ ಮರುಳಸಿದ್ದೇಶ್ವರ್, ಗುಂಡೇರಿ ಚಿದಾನಂದ್, ಚಿಕ್ಕಜಾಜೂರು ಗಿರಿಜಮ್ಮ, ಅಂದನೂರು ಪರಮೇಶ್ವರಪ್ಪ, ದಾಸಯ್ಯನಹಟ್ಟಿ ರಮೇಶ್, ಎನ್.ಆರ್.ಮಹೇಶ್, ಶರತಕುಮಾರ್ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net