

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ದೇಶದ ಸ್ವಾತಂತ್ರ್ಯಕ್ಕಾಗಿ ಮಹನೀಯರ ಜತೆಗೆ ಅನ್ನದಾತ ರೈತ, ದೇಶದ ಸೈನಿಕರ ಸೇವೆಯನ್ನು ಸ್ಮರಿಸಿದಲ್ಲಿ ಸ್ವತಂತ್ರ್ಯ ದಿನಾಚರಣೆ ಸಾರ್ಥಕವಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ಪೂರ್ಣಿಮಾಸುಗ್ಗರಾಜು ತಿಳಿಸಿದರು.
ನಗರಸಭೆ ಅವರಣದಲ್ಲಿ ಗುರುವಾರ ನಗರಸಭೆಯಿಂದ ಆಯೋಜಿಸಿದ್ದ ದಿನಾಚರಣೆಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಹಬ್ಬಗಳಂದು ಧ್ವಜಾರೋಹಣ ಮಾಡಿ ಸಿಹಿ ಹಂಚಿ ಸಂಭ್ರಮಿಸುವುದರ ಜತೆಗೆ ದೇಶದ ಸ್ವತಂತ್ರಕ್ಕಾಗಿ ಜೀವನವನ್ನೆ ಮುಡುಪಾಗಿಟ್ಟಿದ್ದ ಹೋರಾಟಗಾರರು, ಮಹಾಪುರುಷರನ್ನು ಸ್ಮರಿಸಬೇಕಿದೆ ಎಂದರು.
ನಗರಸಭೆ ಉಪಾಧ್ಯಕ್ಷೆ ಸುಜಾತಾ ಮುನಿಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್‌ಮೂಡ್, ಮಾಜಿ ಅಧ್ಯಕ್ಷೆ ಲತಾಹೇಮಂತ್‌ಕುಮಾರ್, ಸದಸ್ಯ ಕೆ.ಎಂ.ಶಿವಕುಮಾರ್, ಗಂಗಾಧರ್‌ರಾವ್, ಎನ್.ಗಣೇಶ್, ವಕೀಲಸಿ.ಪ್ರದೀಪ್, ಎನ್.ಆಂಜಿನಪ್ಪ, ಜಿ.ಆನಂದ್, ನರಸಿಂಹಮೂರ್ತಿ, ಪದ್ಮನಾಭಪ್ರಸಾದ್, ಎಂ.ಎನ್.ಚೇತನ್, ಅಂಜನಮೂರ್ತಿ, ಎ.ಪುರುಷೋತ್ತಮ್, ರಾಜಮ್ಮಪಿಳ್ಳಪ್ಪ, ಪುಷ್ಪಲತಾಮಾರೇಗೌಡ, ಸುಧಾಕೃಷ್ಣಪ್ಪ, ಭಾಗ್ಯನರಸಿಂಹಮೂರ್ತಿ, ಲೋಲಾಕ್ಷಿಗಂಗಾಧರ್, ಭಾರತೀಬಾಯಿ, ದಾಕ್ಷಾಯಣಿರವಿಕುಮಾರ್, ಶಾರದಉಮೇಶ್, ಹೆಚ್ಚುವರಿ ಸದಸ್ಯ ಆಂಜಿನಮೂರ್ತಿ, ಮುನಿರಾಜು, ರಾಮಮೂರ್ತಿ, ಕೃಪಾನಂದ, ಪೌರಾಯುಕ್ತ ಮನುಕುಮಾರ್, ಎಇಇ ನಾಗಲಿಂಗ ಬಡಿಗೇರ್, ವ್ಯವಸ್ಥಾಪಕ ಮಮ್ತಾಜ್‌ಪಾಷಾ, ಕಂದಾಯ ಅಧಿಕಾರಿ ಸರಸ್ವತಿ, ಆರೋಗ್ಯ ನಿರೀಕ್ಷಕಿ ಬಿಜಿ, ಮಮತ, ರವಿಕುಮಾರ್ ಉಪಸ್ಥಿತರಿದರು.