ಜೈನ ಮಂದಿರದಲ್ಲಿ ಧ್ವಜಾರೋಹಣ

jain
Published on

ಮುಂಡರಗಿ: ಪಟ್ಟಣದ ಜೈನ್ ಮಂದಿರದ 18ನೇ ವಾರ್ಷಿಕೋತ್ಸವ ಪ್ರಯುಕ್ತ ಮಂದಿರದ ಧ್ವಜಾರೋಹಣವನ್ನು ಶುಕ್ರವಾರ ನೆರವೇರಿಸಲಾಯಿತು. ಗೌತಮಚಂದ್ ಚೋಪ್ರಾ ಧ್ವಜಾರೋಹಣ ನೆರವೇರಿಸಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಜೈನ್ ಮಂದಿರದ ಶ್ರೀವಾಸುಪೂಜ್ಯಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ನಡೆಸಲಾಯಿತು. ರಣಜೀತ್ ಗುರೂಜಿ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು. ಶಕುಂತಲಾದೇವಿ ಚೋಪ್ರಾ, ಪಾರ್ಸಮಾಲ್ ಮೆಹತಾ, ಪವನ ಚೋಪ್ರಾ, ದಿಲೀಪ್ ಬನ್ಸಾಲಿ, ಸುರೇಶ ಜೈನ್, ಹೀರಾಲಾಲ್ ಜೈನ್, ಮೋಹನಲಾಲ್ ಜೈನ್, ರತನ್ ತಾತೇಡೆ, ಈಶಣ್ಣ ಬೆಟಗೇರಿ, ಎಸ್.ಆರ್. ಬಸಾಪೂರ, ಕೊಟ್ರೇಶ ಅಂಗಡಿ, ಅಶೋಕ ಶಿದ್ಲಿಂಗ್, ವೀರಣ್ಣ ಮೇಟಿ, ರಾಜು ಹೆಗ್ಗಡಾಳ, ಪ್ರಶಾಂತ ತಾವರಗೇರಿ, ಜಯಂತಿಲಾಲ್ ಬನ್ಸಾಲಿ, ದಿನೇಶ ಜೈನ್, ಪ್ರಿಯಾಂಕಾ ಸೋಲಂಕಿ, ಪೂಜಾ ಚೋಪ್ರಾ, ಸರೋಜಾ ಮೆಹತಾ, ಅಂಕಿತಾ ಚೋಪ್ರಾ, ಪೂಜಾ ಜೈನ್, ಕಾಂತಾದೇವಿ ಬೋರಾ, ಸುಶೀಲಾದೇವಿ ಜೈನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net