ಬಲೆಗೆ ಬಿದ್ದ 12 ಕೆ.ಜಿ ತೂಕದ ಮೀನು

27 HANUR 3
Published on

ಚಾಮರಾಜನಗರ: ಹನೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನೆಕಲ್ ಫಾಲ್ಸ್‌ನ ಜಲಾಶಯದಲ್ಲಿ ಬುಧವಾರ ಮೀನುಗಾರನೊಬ್ಬನಿಗೆ 12 ಕೆ.ಜಿ ತೂಕದ ತೇಲಿ ಮೀನು ಬಲೆಗೆ ಬಿದ್ದಿದೆ.

ಹೊಗೆನೆಕಲ್ ನಿವಾಸಿಯಾದ ಮೀನುಗಾರ ಕುಮಾರ್ ಎಂಬವರು ಬುಧವಾರ ಮೀನು ಹಿಡಿಯಲು ಜಲಾಶಯದಲ್ಲಿ ಬಲೆ ಹಾಕಿದ್ದರು. ಈ ವೇಳೆ ಸಮುದ್ರದಲ್ಲಿ ಸಿಗುವ ತೇಲಿ ಮೀನು ಸಿಕ್ಕಿದೆ. ಈ ಮೀನು ಬೇರೆಡೆ ಸಿಗಬಹುದು. ಆದರೆ ಹೊಗೇನಕಲ್ ಜಲಾಶಯದಲ್ಲಿ ತೇಲಿ ಮೀನು ಸಿಕ್ಕಿರುವುದು ನನ್ನ 25 ವರ್ಷದಲ್ಲಿಯೇ ಇದೇ ಮೊದಲನೇ ಬಾರಿಯಾಗಿದ್ದು, ವಿಶೇಷ ಎನಿಸಿದೆ ಎಂದು ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net