ಹೊದ್ದೂರು ಶ್ರೀ ಚಾಮುಂಡಿ ದೇವರ ವಾರ್ಷಿಕ ಉತ್ಸವ ಸಂಪನ್ನ

2.npk -2
Published on

ನಾಪೋಕ್ಲು: ಸಮೀಪದ ಹೊದ್ದೂರು ಗ್ರಾಮದ ಭಗವತಿ ದೇವಾಲಯದ ಬಳಿಯ ಶ್ರೀ ಚಾಮುಂಡಿ (ವಿಷ್ಣುಮೂರ್ತಿ ದೇವರ) ದೈವಾಗಲ ವಾರ್ಷಿಕ ಉತ್ಸವ ಸಾಂಪ್ರದಾಯ, ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಸನ್ನಿಧಿಯಲ್ಲಿ ಬುಧವಾರ ಬೆಳಗ್ಗೆ ಶ್ರೀ ಕಲಿಯಾಟಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ನಿಗಿನಿಗಿಸುವ ಕೆಂಡದ ರಾಶಿಯ ಮೇಲೆ ಶ್ರೀ ಚಾಮುಂಡಿ ತೆರೆ ತಮ್ಮ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಮೇಲೇರಿ (ಕೆಂಡಸೇವೆ) ಎಲ್ಲರ ಗಮನ ಸೆಳೆಯಿತು. ಉತ್ಸವದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ಧಿಗೆ ದೇವರಿಗೆ ವಿವಿಧ ರೀತಿಯ ಹರಕೆ, ಕಾಣಿಕೆ ಸಲ್ಲಿಸಲಾಯಿತು. ಉತ್ಸವದಲ್ಲಿ ಭಕ್ತರಿಗೆ ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಚಾಮುಂಡಿ ತೆರೆ ಮೇಲೇರಿಗೆ ಬೀಳುವ ದೃಶ್ಯ ಭಕ್ತರನ್ನು ರೋಮಾಂಚನಗೊಳಿಸಿತು.

ಇದಕ್ಕೂ ಮೊದಲು ಸೋಮವಾರ ಶ್ರೀ ಚಾಮುಂಡಿ ದೇವರ ಕೆಂಡ ಸೇವೆಗೆ ಬೇಕಾದ ಸೌದೆ ಕಡಿದು. ರಾತ್ರಿ ತ್ವಾತ ತೆರೆ ಜರುಗಿತ್ತು. ಮಂಗಳವಾರ ರಾತ್ರಿ ಅಂದಿ ತ್ವಾತ ತೆರೆ, ಮೇಲರಿಗೆ ಬೆಂಕಿ ಹಾಕುವುದು, ನಂತರ ಉಚ್ಚ ತ್ವಾತ ತೆರೆ ಮತ್ತು ಮಂದಣ್ಣ ಮೂರ್ತಿ ಕೋಲ ನಡೆದವು.

ಈ ಸಂದರ್ಭ ಆಡಳಿತ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು, ತಕ್ಕಮುಖ್ಯಸ್ಥರು ಹಾಗೂ ನೂರಾರು ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net