

ಮಂಡ್ಯ: ತಾಲೂಕಿನ ಹೊಡಘಟ್ಟ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಾಣಸವಾಡಿ ಮಹೇಶ್ ಆರು ಮತದ ಅಂತರದಲ್ಲಿ ಗೆಲುವು ಹಾಗೂ ಉಪಾಧ್ಯಕ್ಷರಾಗಿ ಮಂಜುಳಾ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿಯಿತು.
14 ಸದಸ್ಯ ಬಲದ ಗ್ರಾಪಂನ ವರಿಷ್ಠರ ಆಯ್ಕೆಗೆ ಕಚೇರಿಯಲ್ಲಿ ಸೋಮವಾರ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಾಣಸವಾಡಿ ಮಹೇಶ್ ಮತ್ತು ಸೋಮಶೇಖರ್ ನಾಮಪತ್ರ ಸಲ್ಲಿಸಿದರು. ಅಂತೆಯೇ ಮಹೇಶ್ ಪರವಾಗಿ 10, ಸೋಮಶೇಖರ್ ಪರವಾಗಿ 4 ಮತ ಚಲಾವಣೆಗೊಂಡವು. ಇತ್ತ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ಮಾತ್ರ ನಾಮಪತ್ರ ಸಲ್ಲಿಸಿದರು.
ನೂತನ ವರಿಷ್ಠರನ್ನು ಮಾಜಿ ಅಧ್ಯಕ್ಷರಾದ ಪ್ರತಿಮಾ ಚಲುವರಾಜು, ಮನುಕುಮಾರ್, ಗಿರೀಶ್ ಪಟೇಲ್, ಮಾಜಿ ಉಪಾಧ್ಯಕ್ಷ ಆನಂದ್, ಚಂದ್ರು, ಸದಸ್ಯರಾದ ಸಿದ್ದರಾಜು, ಮುಖಂಡ ಹರೀಶ್ ಬಾಣಸವಾಡಿ, ವಕೀಲ ಅರುಣ್‌ಕುಮಾರ್, ರವಿ ಅಭಿನಂದಿಸಿದರು.