

ಮೈಸೂರು: ಉತ್ತಮ ಪ್ರದರ್ಶನ ನೀಡಿರುವ ಎಜಿಒಆರ್‌ಸಿ, ಡಿವೈಇಎಸ್ ಬೆಂಗಳೂರು, ಎಂಇಜಿ ಬಾಯ್ಸ ಹಾಗೂ ಸೌತ್ ವೆಸ್ಟ್ರನ್ ರೈಲ್ವೆಸ್ ತಂಡಗಳು ಪುರುಷರ ಆಹ್ವಾನಿತ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿವೆ.
ಮೈಸೂರು ವಿಶ್ವವಿದ್ಯಾಲಯದ ಹಾಕಿ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಎಜಿಒಆರ್‌ಸಿ ತಂಡ 3-0 ಗೋಲುಗಳಿಂದ ಗದಗ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು. ನಿತೀನ್ ತಿಮ್ಮಯ್ಯ (24 ಮತ್ತು 34 ನಿಮಿಷ) ಎರಡು ಹಾಗೂ ಮೊಹಿಮುದ್ದಿನ್ (31 ನಿ.) ಒಂದು ಗೋಲು ಬಾರಿ ತಂಡದ ಗೆಲುವಿಗೆ ನೆರವಾದರು.
ಉಳಿದ ಪಂದ್ಯಗಳಲ್ಲಿ ಡಿವೈಇಎಸ್ ಬೆಂಗಳೂರು ತಂಡ 12-0 ಗೋಲುಗಳಿಂದ ಧಾರಾವಾಡ ತಂಡದ ವಿರುದ್ಧ , ಎಂಇಜಿ ಬಾಯ್ಸ ತಂಡ 2-1 ಗೋಲುಗಳಿಂದ ಹಾನಸ ವಿರುದ್ಧ ಹಾಗೂ ಸೌತ್ ವೆಸ್ಟ್ರನ್ ರೈಲ್ವೆಸ್ ತಂಡ 4-0 ಗೋಲುಗಳಿಂದ ಬಳ್ಳಾರಿ ತಂಡ ವಿರುದ್ಧ ಜಯ ಸಾಧಿಸಿತು.
ಮೈಸೂರು ಪಂದ್ಯ ಡ್ರಾನಲ್ಲಿ ಅಂತ್ಯ: ಮೈಸೂರು ಹಾಗೂ ಎಜಿಒಆರ್‌ಸಿ ನಡುವಿನ ಪಂದ್ಯ 1-1 ಗೋಲುಗಳಿಂದ ಡ್ರಾನಲ್ಲಿ ಅಂತ್ಯಗೊಂಡಿತು.