

ಮಡಿಕೇರಿ:
ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಮುದ್ದಂಡ ಕಪ್ ಟೂರ್ನಮೆಂಟ್‌ನಲ್ಲಿ ಭಾನುವಾರ 20 ತಂಡಗಳು ಮುಂದಿನ ಹಂತ ಪ್ರವೇಶಿಸಿದವು. ಮೋಡ ಕವಿದ ವಾತಾವರಣ ಇದ್ದರೂ ಮಳೆ ಕಾಣಿಸಿಕೊಳ್ಳಲಿಲ್ಲ. ಮೊಣ್ಣಂಡ ಮತ್ತು ಚೀರಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಸಮಯದಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ನಂತರ ಟೈ ಬ್ರೇಕರ್‌ಗೆ ಅವಲಾಶ ಮಾಡಿಕೊಡಲಾಯಿತು. ಉದ್ದಿನಾಡಂಡ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲಿಯಂಡ ತಂಡ 7-0 ಅಂತರದಲ್ಲಿ ಭರ್ಜರಿ ಗೆಲವು ಸಾಧಿಸಿದ್ದು ವಿಶೇಷವಾಗಿತ್ತು.
ಮೈದಾನ 1ರಲ್ಲಿ ಮೊಳ್ಳೇರ ಮತ್ತು ಅಪ್ಪನೆರವಂಡ ತಂಡಗಳ ನಡುವಿನ ಪಂದ್ಯದಲ್ಲಿ 4-3 ಗೋಲುಗಳ ಅಂತರದಲ್ಲಿ ಅಪ್ಪನೆರವಂಡ ತಂಡ ಜಯ ದಾಖಲಿಸಿದರೆ, ಪಾಂಡAಡ ಮತ್ತು ಕುಮ್ಮಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲು ಗಳಿಸುವ ಮೂಲಕ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್ ನಲ್ಲಿ 4-2 ಗೋಲುಗಳ ಅಂತರದಲ್ಲಿ ಕುಮ್ಮಂಡ ತಂಡ ಗೆಲುವು ದಾಖಲಿಸಿತು. ತಂಬುಕುತ್ತೀರ ಮತ್ತು ಕಳ್ಳಂಗಡ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ತಂಬುಕುತ್ತೀರ ಜಯ ಸಾಧಿಸಿತು. ಮಲ್ಲಂಗಡ ಮತ್ತು ಸಿದ್ದಂಡ ತಂಡಗಳ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಮಲ್ಲಂಗಡ ಗೆಲುವುದು ದಾಖಲಿಸಿತು. ಮೊಣ್ಣಂಡ ಮತ್ತು ಚೀರಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಸಮಬಲದ ಹೋರಾಟ ನಡೆಸಿ ನಿಗದಿತ ಸಮಯದಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ನಂತರ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಚೀರಂಡ ತಂಡ ಗೆಲುವು ದಾಖಲಿಸಿತು. ಅರಮಣಮಾಡ ಮತ್ತು ಮೇವಡ ತಂಡಗಳ ನಡುವಿನ ಪಂದ್ಯದಲ್ಲಿ ಮೇವಡ ತಂಡ 1-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.
ಮೈದಾನ 2ರಲ್ಲಿ ಚೆಯ್ಯಂಡ ಮತ್ತು ಕೇಲೇಟಿರ ತಂಡಗಳ ನಡುವೆ ಹಣಾಹಣಿ ನಡೆದು ಕೇಲೇಟಿರ ತಂಡ 3-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಆದೇಂಗಡ ಮತ್ತು ಪುಗ್ಗೇರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಆದೇಂಗಡ ತಂಡ ಭರ್ಜರಿ ಗೆಲುವು ಸಾಧಿಸಿತು. ಪುಚ್ಚಿಮಾಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ ನಾಪಂಡ ತಂಡ 3-2 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿದರೆ, ಕೊಟೇರ ಮತ್ತು ಕಾಳೆಂಗಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೊಟೇರ ತಂಡ ಜಯ ಸಾಧಿಸಿತು. ಕಂಗAಡ ಮತ್ತು ಕುಪ್ಪಂಡ (ನಾಂಗಾಲ) ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕುಪ್ಪಂಡ (ನಾಂಗಾಲ) ಜಯ ಸಾಧಿಸಿತು. ಚೆಟ್ಟಿಯಾರಂಡ ಮತ್ತು ಶಾಂತೆಯAಡ ನಡುವಿನ ಪಂದ್ಯದಲ್ಲಿ 5-1 ಗೋಲುಗಳ ಅಂತರದಲ್ಲಿ ಶಾಂತೆಯAಡ ತಂಡ ಗೆಲುವು ದಾಖಲಿಸಿದರೆ ಅಚ್ಚಪಂಡ ಮತ್ತು ಮರ್ಚಂಡ ನಡುವಿನ ಪಂದ್ಯದಲ್ಲಿ ಮರ್ಚಂಡ ತಂಡ 1-0 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು.
ಮೈದಾನ 3ರಲ್ಲಿ ಉದ್ದಿನಾಡಂಡ ಮತ್ತು ಕಲಿಯಂಡ ತಂಡಗಳ ನಡುವಿನ ನಡುವೆ ನಡೆದ ಪಂದ್ಯದಲ್ಲಿ ಕಲಿಯಂಡ ತಂಡ 7-0 ಅಂತರದಲ್ಲಿ ಭರ್ಜರಿ ಜಯಬೇರಿ ಬಾರಿಸಿತು. ಕರಿನೆರವಂಡ ಮತ್ತು ಕನ್ನಿಕಂಡ ತಂಡಗಳ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಕರಿನೆರವಂಡ ಜಯ ಸಾಧಿಸಿದರೆ ಬಯವಂಡ ಮತ್ತು ಕೊಣಿಯಂಡ ನಡುವಿನ ಪಂದ್ಯದಲ್ಲಿ ಬಯವಂಡ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮುಕ್ಕಾಟಿರ (ಹರಿಹರ) ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು) ನಡುವಿನ ಪಂದ್ಯದಲ್ಲಿ ಮುಕ್ಕಾಟಿರ (ಹರಿಹರ) 1-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮಣವಟ್ಟಿರ ಮತ್ತು ಕಳ್ಳಿಚಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತದಲ್ಲಿ ಕಳ್ಳಿಚಂಡ ಗೆಲುವಿನ ನಗು ಬೀರಿತು. ಕಳ್ಳಿರ ಮತ್ತು ಕರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಕರವಂಡ ತಂಡ 6-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದರೆ ಬಯವಂಡ ಮತ್ತು ಕೊಣಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಬಯವಂಡ ತಂಡ ಗೆಲುವು ದಾಖಲಿಸಿತು.