ದಾಖಲೆಯ 396 ತಂಡಗಳ ನೋಂದಣಿ

hockey
Published on

ಮಡಿಕೇರಿ:

ಈ ಬಾರಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇರುವ ಕೊಡವ ಹಾಕಿ ನಮ್ಮೆಯಲ್ಲಿ ಪಾಲ್ಗೊಳ್ಳಲು ದಾಖಲೆಯ ಒಟ್ಟು 396 ಕುಟುಂಬ ತಂಡಗಳು ನೋಂದಾಯಿಸಿಕೊAಡಿವೆ.

ನೋಂದಣಿ ಪ್ರಕ್ರಿಯೆ ಮಂಗಳವಾರಕ್ಕೆ (ಮಾ.18) ಕೊನೆಗೊಂಡಿದ್ದು, ಕೊಡವ ಹಾಕಿ ಅಕಾಡೆಮಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ 25ನೇ ಆವೃತ್ತಿಯ ಈ ಪಂದ್ಯಾವಳಿ ಆತಿಥ್ಯವನ್ನು ಈ ಬಾರಿ ಮುದ್ದಂಡ ಕುಟುಂಬ ವಹಿಸಿಕೊಂಡಿದೆ.

ಪಂದ್ಯಾವಳಿ ಈ ತಿಂಗಳ 28ಕ್ಕೆ ಆರಂಭವಾಗಲಿದ್ದು, ಏ. 27ರ ತನಕ ನಡೆಯಲಿದೆ. ಇದಕ್ಕಾಗಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನ ಮತ್ತು ಪೊಲೀಸ್ ಕವಾಯತ್ತು ಮೈದಾನದಲ್ಲಿ ಭರದ ಸಿದ್ಧತೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net