

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಮಂಗಳವಾರ ೨೧ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೧ರಲ್ಲಿ ಕುಂದಿರ ಮತ್ತು ಪೊನ್ನಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಪೊನ್ನಿಮಾಡ ತಂಡ ಗೆಲುವು ದಾಖಲಿಸಿತು. ಚಟ್ಟಂಗಡ ಮತ್ತು ಕುಟ್ಟಂಡ(ಅಮ್ಮತ್ತಿ) ನಡುವಿನ ಪಂದ್ಯದಲ್ಲಿ ಕುಟ್ಟಂಡ ತಂಡ ೩-೦ ಗೋಲುಗಳ ಅಂತರದಲ್ಲಿ ಜಯಸಾಧಿಸಿತು. ಪಾಲೆಂಗಡ ಮತ್ತು ಕನ್ನಂಬಿರ ನಡುವಿ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಕನ್ನಂಬಿರ ಜಯ ಸಾಧಿಸಿತು. ಪುಟ್ಟಿಚಂಡ ಮತ್ತು ಕುಟ್ಟೇಟಿರ ನಡುವಿನ ಪಂದ್ಯದಲ್ಲಿ ಪುಟ್ಟಿಚಂಡ ೧-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಬೈರೇಟಿರ ಮತ್ತು ಪಳೆಯಂಡ(ಹಮ್ಮಿಯಾಲ) ಬೈರೇಟಿರ ತಂಡ ೧-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಮಂದಂಗಡ ಮತ್ತು ಐಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಂದಂಗಡ ೪-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮಂಡೇಡ ಮತ್ತು ದೇಯಂಡ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಮಂಡೇಡ ಜಯ ಸಾಧಿಸಿತು.
ಮೈದಾನ ೨ರಲ್ಲಿ ನಡೆದ ಪಂದ್ಯದಲ್ಲಿ ಅನ್ನಡಿಯಂಡ ಮತ್ತು ಬಟ್ಟಕಾಳಂಡ ವಾಕ್ ಓವರ್‌ನಲ್ಲಿ ಅನ್ನಡಿಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಚೇರಂಡ ಮತ್ತು ಚೆನ್ನಪಂಡ ನಡುವಿನ ಪಂದ್ಯ ಯಾವುದೇ ಗೋಲು ದಾಖಲಾಗದೆ ಡ್ರಾ ಆದ ಕಾರಣ ಟೈ ಬ್ರೇಕರ್‌ನಲ್ಲಿ ೪-೩ ಗೋಲುಗಳ ಅಂತರದಲ್ಲಿ ಚೇರಂಡ ತಂಡ ಜಯ ಸಾಧಿಸಿತು. ನಂದಿನೆರವಂಡ ಮತ್ತು ಐತಿಚಂಡ ನಡುವಿನ ಪಂದ್ಯದಲ್ಲಿ ಐತಿಚಂಡ ತಂಡ ೨-೧ ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಮುಂಡಂಡ ಮತ್ತು ಅಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಅಮ್ಮಂಡ ತಂಡ ಗೆಲುವು ದಾಖಲಿಸಿತು.
ಕಟ್ಟೆರ ಮತ್ತು ಮಾಳೇಟಿರ(ಕೆದಮುಳ್ಳೂರು) ನಡುವಿನ ಪಂದ್ಯದಲ್ಲಿ ಮಾಳೇಟಿರ ೫-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಚೇಂದ್ರಿಮಾಡ ಮತ್ತು ಸುಳ್ಳಿಮಾಡ ನಡುವಿನ ಪಂದ್ಯದಲ್ಲಿ ಸುಳ್ಳಿಮಾಡ ತಂಡ ೪-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮುಂಡೋಟಿರ ಮತ್ತು ಚೋಡುಮಾಡ ನಡುವಿನ ಪಂದ್ಯದಲ್ಲಿ ತಲಾ ೨ ಗೋಲುಗಳ ಮೂಲಕ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್‌ನಲ್ಲಿ ೪-೨ ಗೋಲುಗಳ ಅಂತರದಲ್ಲಿ ಚೋಡುಮಾಡ ತಂಡ ಗೆಲುವು ದಾಖಲಿಸಿತು.
ಮೈದಾನ ೩(ಪೊಲೀಸ್ ಕವಾಯತ್ತು ಮೈದಾನ)ರಲ್ಲಿ ಚೋಕಿರ ಮತ್ತು ವಲ್ಲಂಡ ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಚೋಕಿರ ಜಯ ಸಾಧಿಸಿತು. ಚೊಟ್ಟೆಯಂಡ ಮತ್ತು ತೆಕ್ಕಡ ನಡುವಿನ ಪಂದ್ಯದಲ್ಲಿ ತೆಕ್ಕಡ ತಂಡ ೨-೦ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.
ಕಾಯಪಂಡ ಮತ್ತು ಉಪ್ಪಂಗಡ ನಡುವಿನ ಪಂದ್ಯದಲ್ಲಿ ಕಾಯಪಂಡ ೫-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮಾಳೇಟಿರ(ಕುಕ್ಲೂರು) ಮತ್ತು ಅವರೆಮಾದಂಡ ತಂಡಗಳ ನಡುವಿ ಪಂದ್ಯದಲ್ಲಿ ಮಾಳೇಟಿರ ತಂಡ ೧-೦ ಗೋಲು ಅಂತರದಲ್ಲಿ ಗೆಲುವು ದಾಖಲಿಸಿತು. ಕಾವಾಡಿಚಂಡ ಮತ್ತು ಕಾಳಚಂಡ ನಡುವಿನ ಪಂದ್ಯದಲ್ಲಿ ಕಾವಾಡಿಚಂಡ ೩-೦ ಗೋಲುಗಳ ಅಂತರದಿಂದ ಜಯಸಾಧಿಸಿತು. ಮೇಕೇರಿರ ಮತ್ತು ಕೈಬುಲಿರ ತಂಡಗಳ ೪-೦ ನಡುವೆ ನಡೆದ ಪಂದ್ಯದಲ್ಲಿ ಮೇಕೇರಿರ ತಂಡದ ನೆಹಲ್ ತಮಯ್ಯ ಹಾಗೂ ರೋನಕ್ ತಿಮ್ಮಯ್ಯ ತಲಾ ೨ ಗೋಲು ದಾಖಲಿಸಿದರು. ತೋಲಂಡ ತಂಡ ಬಾರ ಹಿನ್ನೆಲೆ ಉಳ್ಳಿಯಡ ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು.
ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ವಿವರ
ಕಾವೇರಪ್ಪ, ಸುರೇಂದ್ರ, ಪಾಲೆಂಗಡ ಬೋಪಣ್ಣ, ಕುಟ್ಟೇಟಿರ ಮಾದಪ್ಪ, ಪಳೆಯಂಡ ರಿತಿಕ್, ಐಮಂಡ ಪ್ರವೀಣ್, ಸಂಜು ಸೋಮಯ್ಯ, ಚೆನ್ನಪಂಡ ಪ್ರಕಾಶ್, ನಂದಿನೆರವಂಡ ಸೂರಜ್, ಮುಂಡಂಡ ಕೌಶಿಕ್, ಕಟ್ಟೇರ ನಿರನ್ ಉತ್ತಪ್ಪ, ಚೇಂದ್ರಿಮಾಡ ಕಾರ್ಯಪ್ಪ, ಚೇತನ್ ಗಣಪತಿ, ಧನೀಶ್ ಪೊನ್ನಣ್ಣ, ಸಂಜು, ಉಪ್ಪಂಗಡ ಸ್ವಾತಿ, ಅವರೆಮಾದಂಡ ಕುಶಾಲಪ್ಪ, ಕಾಳಚಂಡ ಅಭಿಜ್ಞಾ ಚೋಂದಮ್ಮ, ಕೈಬುಲಿರ ಅಯ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಇಂದಿನ ಪಂದ್ಯಾಟದ ವಿವರ
ಮೈದಾನ-೧
ಬೆಳಿಗ್ಗೆ ೯ ಗಂಟೆಗೆ ಚೌರೀರ(ಹೊಡವಾಡ) ಮತ್ತು ಮುಕ್ಕಾಟಿರ(ಬೇತ್ರಿ), ೧೦ ಗಂಟೆಗೆ ಚೆರಿಯಪಂಡ ಮತ್ತು ಶಿವಚಾಳಿಯಂಡ ಮಧ್ಯಾಹ್ನ ೧೨ ಗಂಟೆಗೆ ಮೂಕಳಮಾಡ ಮತ್ತು ಅಜ್ಜಿಕುಟ್ಟೀರ, ೧ ಗಂಟೆಗೆ ಪಾಲಂದಿರ ಮತ್ತು ಇಂದಂಡ, ೨ ಗಂಟೆಗೆ ಮುಕ್ಕಾಟಿರ(ಕುಂಜಿಲಗೇರಿ) ಮತ್ತು ಮಚಂಡ, ೩ ಗಂಟೆಗೆ ಮಲ್ಲಂಗಡ ಮತ್ತು ಸಿದ್ದಂಡ ಕುಟುಂಬಗಳು ಸೆಣಸಾಟ ನಡೆಸಲಿದೆ.
ಮೈದಾನ-೨
ಬೆಳಿಗ್ಗೆ ೯ ಗಂಟೆಗೆ ನಳಿಯಂಡ ಮತ್ತು ಕೊಕ್ಕಲೇರ, ೧೦ ಗಂಟೆಗೆ ತಾತಂಡ ಮತ್ತು ಕುಯಿಮಂಡ, ೧೧ ಗಂಟೆಗೆ ಕೊಕ್ಕಲೆಮಾಡ ಮತ್ತು ಕಾಳೆಯಂಡ, ಮಧ್ಯಾಹ್ನ ೧ ಗಂಟೆಗೆ ನಾಯಕಂಡ ಮತ್ತು ಕಳ್ಳಿಚಂಡ, ೨ ಗಂಟೆಗೆ ನಡಿಕೇರಿಯಂಡ ಮತ್ತು ಪಂದ್ಯಂಡ, ೩ ಗಂಟೆಗೆ ಕಾಳಿಮಾಡ ಮತ್ತು ನಂಬುಡುಮಾಡ, ಸಂಜೆ ೪ ಗಂಟೆಗೆ ಕೊಟ್ಟುಕತ್ತಿರ ಮತ್ತು ಕಳಕಂಡ ಕುಟುಂಬಗಳು ಹಣಾಹಣಿ ನಡೆಸಲಿದೆ.
ಮೈದಾನ-೩
ಬೆಳಿಗ್ಗೆ ೯ ಗಂಟೆಗೆ ತಿರೋಡಿರ ಮತ್ತು ತಿರುಟೇರ, ೧೦ ಗಂಟೆಗೆ ಕೇತಿರ ಮತ್ತು ಕೊಚ್ಚೆರ, ೧೧ ಗಂಟೆಗೆ ಕಲ್ಲಂಗಡ ಮತ್ತು ನಾಮೇರ, ಮಧ್ಯಾಹ್ನ ೧೨ ಗಂಟೆಗೆ ಚಟ್ಟಂಡ ಮತ್ತು ತೀತರಮಾಡ, ೧ ಗಂಟೆಗೆ ಚೊಟ್ಟೆಯಂಡಮಾಡ ಮತ್ತು ಉಡುವೆರ, ೨ ಗಂಟೆಗೆ ಬಲ್ಲಾರಂಡ ಮತ್ತು ಕಾಳೆಂಗಡ ಕುಟುಂಬಗಳು ಪೈಪೋಟಿ ನಡೆಸಲಿದೆ.