ಹಾಕಿ: ೨೧ ತಂಡಗಳು ಮುಂದಿನ ಸುತ್ತಿಗೆ

kodava hocky
Published on

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಶನಿವಾರ ೨೧ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೧ರಲ್ಲಿ ಅಯ್ಯರಣಿಯಂಡ ಮತ್ತು ಅಡ್ಡಂಡ(ಸೂರ್ಲಬ್ಬಿ) ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಅಯ್ಯರಣಿಯಂಡ ತಂಡ ಜಯಗಳಿಸಿ ಮುಂದಿನ ಸುತ್ತಿಗೆ ಆಯ್ಕೆಗೊಂಡಿದೆ. ಬೊಳ್ಳಚೆಟ್ಟಿರ ಮತ್ತು ಗಾಂಡಗಂಡ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಗಾಂಡಗಂಡ ೩-೦ ಗೋಲು ಅಂತರದಲ್ಲಿ ಗೆಲುವು ಸಾಧಿಸಿತು. ತಂಡದ ಬಿಪಿನ್ ಬೋಪಣ್ಣ ೨ ಹಾಗೂ ರಾಬೀನ್ ಬೆಳ್ಯಪ್ಪ ೧ ಗೋಲು ದಾಖಲಿಸಿದರು.

ಬೊಳ್ಳಿಮಾಡ ಮತ್ತು ಬೆರೇರಾ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ೨-೦ ಅಂತರದಲ್ಲಿ ಬೆರೇರಾ ತಂಡ ಗೆಲುವು ಸಾಧಿಸಿತು. ತಂಡದ ಆಟಗಾರರಾದ ಸೂರಜ್ ಹಾಗೂ ಮಿತುನ್ ಬೆಳ್ಯಪ್ಪ ತಲಾ ೧ ಗೋಲು ಬಾರಿಸಿದರು. ಗುಡ್ಡಂಡ ಮತ್ತು ಕುಂಡ್ಯೋಳಂಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಕುಂಡ್ಯೋಳಂಡ ತಂಡ ೪-೦ ಅಂತರದಲ್ಲಿ ಜಯ ಸಾಧಿಸಿದೆ. ಕುಂಡ್ಯೋಳಂಡ ತಂಡದ ಬಿಪಿನ್ ಬೆಳ್ಯಪ್ಪ, ಪೊನ್ನಪ್ಪ, ಪಳಂಗಪ್ಪ ಹಾಗೂ ವಿಕಾಸ್ ತಲಾ ೧ ಗೋಲು ದಾಖಲಿಸಿದರು. ಗುಡ್ಡಂಡ ತಂಡದ ಪ್ರಧಾನ್ ಮ್ಯಾನ್‌ಆಫ್‌ದ ಮ್ಯಾಚ್ ಪ್ರಶಸ್ತಿ ಪಡೆದರು.

ಮುಕ್ಕಾಟಿರ ಮತ್ತು ಚೆಟ್ಟಿರ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಮುಕ್ಕಾಟಿರ ತಂಡ ೪-೦ ಗೋಲುಗಳ ಅಂತರದಿಂದ ಜಯಗಳಿಸಿತು. ಮುಕ್ಕಾಟಿರ ತಂಡದ ಕಾವ್ಯ ದೇವಯ್ಯ ಹಾಗೂ ನಾಣಯ್ಯ ತಲಾ ೨ ಗೋಲು ದಾಖಲಿಸಿದರು. ಚೆಟ್ಟಿರ ತಂಡದ ಕರಣ್ ಕಾರ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಬೊಳ್ಳೇರಪಂಡ ಮತ್ತು ಪುಲಿಯಂಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ೫-೦ ಗೋಲುಗಳ ಅಂತರದಲ್ಲಿ ಪುಲಿಯಂಡ ತಂಡ ಗೆಲುವು ಸಾಧಿಸಿತು. ಪುಲಿಯಂಡ ತಂಡದ ದೀಪಕ್ ತಿಮ್ಮಣ್ಣ, ಶರತ್ ತಲಾ ೨ ಗೋಲು ದಾಖಲಿಸಿದರೆ, ಗೌತಮ್ ೧ ಗೋಲು ಬಾರಿಸಿದರು. ಬೊಳ್ಳೇರಪಂಡ ತಂಡದ ಅರ್ಜುನ್ ಪೂಣಚ್ಚ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮೈದಾನ ೨ರಲ್ಲಿ ನಡೆದ ಕಾಂಗೀರ ಮತ್ತು ಪಾಲಚಂಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಕಾಂಗೀರ ತಂಡ ೨-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕಾಂಗೀರ ತಂಡದ ಆಕಾಶ್ ನಾಚಪ್ಪ ಹಾಗೂ ನಿಹಾಲ್ ನಾಚಪ್ಪ ತಲಾ ೧ ಗೋಲು ಪಡೆದುಕೊಂಡರು. ಪಾಲಚಂಡ ತಂಡದ ಚೇತನ್ ಬೋಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

ಸರ್ಕಂಡ ಮತ್ತು ಉದ್ದಿನಾಡಂಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ೫-೧ ಗೋಲುಗಳ ಅಂತರದಲ್ಲಿ ಉದ್ದಿನಾಡಂಡ ತಂಡ ಜಯ ಸಾಧಿಸಿತು. ಉದ್ದಿನಾಡಂಡ ತಂಡದ ವಿಪುಲ್ ಉತ್ತಪ್ಪ ದಾಖಲೆಯ ೪ ಗೋಲು ದಾಖಲಿಸಿದರು. ಸಾಗರ್ ೧ ಗೋಲು ಬಾರಿಸಿದರು. ಸರ್ಕಂಡ ತಂಡದ ಬಬೀಬ್ ಗಣಪತಿ ೧ ಗೋಲು ದಾಖಲಿಸಿದರು. ಸರ್ಕಂಡ ತಂಡದ ಬಬೀನ್ ಗಣಪತಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು.

ಹಂಚೆಟ್ಟಿರ ಮತ್ತು ಮಾಚಂಗಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಮಾಚಂಗಡ ತಂಡ ೩-೧ ಗೋಲು ಅಂತರ ಗೆಲುವು ಸಾಧಿಸಿತು. ಮಾಚಂಗಡ ತಂಡದ ಲಕ್ಷ್ಯ ಅಯ್ಯಪ್ಪ ಹಾಗೂ ಕುಶ ತಲಾ ೧ ಗೋಲು ಬಾರಿಸಿದರೆ, ಹಂಚೆಟ್ಟಿರ ತಂಡದ ನವೀನ್ ನಾಚಪ್ಪ ೧ ಗೋಲು ದಾಖಲಿಸಿದರು. ಹಂಚೆಟ್ಟಿರ ತಂಡದ ಬೋಪಣ್ಣ ಮ್ಯಾನ್ ಆಫ್‌ದ ಮ್ಯಾಚ್ ಪ್ರಶಸ್ತಿ ಪಡೆದರು.

ಓಡಿಯಂಡ ಮತ್ತು ಮೋರ್ಕಂಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಓಡಿಯಂಡ ತಂಡ ೪-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಓಡಿಯಂಡ ತಂಡದ ಗಗನ್ ೨ ಹಾಗೂ ಪೊನ್ನಣ್ಣ ಮತ್ತು ಕೀರ್ತನ್ ಕಾರ್ಯಪ್ಪ ತಲಾ ೧ ಗೋಲು ದಾಖಲಿಸಿದರು. ಮೋರ್ಕಂಡ ತಂಡದ ವಿಶಾಲ್ ಪೊನ್ನಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

ಪೊಲೀಸ್ ಕವಾಯತ್ ಮೈದಾನದಲ್ಲಿ ನಡೆದ ಚೋಕಂಡ ಮತ್ತು ಮೂಕಚಂಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಮೂಕಚಂಡ ತಂಡ ೨-೦ ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು. ಮೂಕಚಂಡ ತಂಡದ ವಿನಿಶ್ ಮುತ್ತಪ್ಪ ೨ ಗೋಲು ದಾಖಲಿಸಿದರು. ಚೋಕಂಡ ತಂಡದ ಚಿರಾಗ್ ಚಿಟ್ಟಿಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

ಚೆಯ್ಯಂಡಿರ ಮತ್ತು ತಾಣಚ್ಚಿರ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಚೈಯಂಡ ತಂಡ ೩-೧ ಅಂತರದಲ್ಲಿ ಗೆಲುವು ಸಾಧಿಸಿತು. ಚೆಯ್ಯಂಡಿರ ತಂಡದ ಕಿಲನ್ ನಾಚಪ್ಪ ೨, ಅಭಿನ್ ಅಯ್ಯಪ್ಪ ೧ ಗೋಲು ದಾಖಲಿಸಿದರು. ತಾಣಚ್ಚಿರ ತಂಡದ ನಿಖಿಲ್ ಸೋಮಣ್ಣ ೧ ಗೋಲು ಬಾರಿಸಿದರು. ತಾಣಚ್ಚಿರ ತಂಡದ ನಿಖಿಲ್ ಸೋಮಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮೈದಾನ ೧

ಬೆಳಿಗ್ಗೆ ೯ ಗಂಟೆಗೆ ಕೋಳುಮಾಡಂಡ ಮತ್ತು ಕೊಲ್ಲೀರ, ೧೦ ಗಂಟೆಗೆ ಪೊರ್ಕಂಡ ಮತ್ತು ಪುಲ್ಲೇರ, ೧೧ ಗಂಟೆಗೆ ಕೋಳೇರ ಮತ್ತು ಪುದಿಯತಂಡ, ಮಧ್ಯಾಹ್ನ ೧೨ ಗಂಟೆಗೆ ಬೊಳ್ಳಚಂಡ ಮತ್ತು ಉದಿಯಂಡ (ಮುಟ್ಲು), ೧ ಗಂಟೆಗೆ ಅಲ್ಲಪಿರ ಮತ್ತು ಮಂದನೆರವಂಡ, ೨ ಗಂಟೆಗೆ ಬೊಳ್ಳಿಯಂಗಡ ಮತ್ತು ಮಾಚಮಾಡ, ೩ ಗಂಟೆಗೆ ಪುಗ್ಗೇರ ಮತ್ತು ಗೀಜಗಂಡ, ಸಂಜೆ ೪ ಗಂಟೆಗೆ ಗುಮ್ಮಟ್ಟಿರ ಮತ್ತು ಕಾಂಡೇರ ಕುಟುಂಬದ ತಂಡಗಳು ಸೆಣಸಾಟ ನಡೆಸಲಿದೆ.

ಮೈದಾನ ೨

ಬೆಳಿಗ್ಗೆ ೯ ಗಂಟೆಗೆ ಕರವಂಡ ಮತ್ತು ಅಳ್ಮಂಡ, ೧೦ ಗಂಟೆಗೆ ನುಚ್ಚಿಮಣಿಯಂಡ ಮತ್ತು ಅಮ್ಮಾಟಂಡ, ೧೧ ಗಂಟೆಗೆ ಸೋಮೆಯಂಡ ಮತ್ತು ಉದಿಯಂಡ (ಕಕ್ಕಬ್ಬೆ), ಮಧ್ಯಾಹ್ನ ೧೨ ಗಂಟೆಗೆ ತಾತಚ್ಚಮಂಡ ಮತ್ತು ತಂಬಂಡ, ೧ ಗಂಟೆಗೆ ನಾಗಚೆಟ್ಟೀರ ಮತ್ತು ಬಲ್ಲಣಮಾಡ, ೨ ಗಂಟೆಗೆ ಮಚ್ಚಾರಂಡ ಮತ್ತು ಬಟ್ಟಿಯಂಡ, ೩ ಗಂಟೆಗೆ ಕೋದಂಡ ಮತ್ತು ಪೂದ್ರಿಮಾಡ, ಸಂಜೆ ೪ ಗಂಟೆಗೆ ಬಡುವಂಡ ಮತ್ತು ಮದ್ರೀರ ಕುಟುಂಬದ ತಂಡಗಳು ಸೆಣಸಾಟ ನಡೆಸಲಿದೆ.

ಮೈದಾನ ೩

ಬೆಳಿಗ್ಗೆ ೯ ಗಂಟೆಗೆ ಬಲ್ಲಟ್ಟಿಕಾಳಂಡ ಮತ್ತು ಮೊಣ್ಣಂಡ, ೧೦ ಗಂಟೆಗೆ ಮಿನ್ನಂಡ ಮತ್ತು ಕೈಪಟ್ಟಿರ, ೧೧ ಗಂಟೆಗೆ ತಂಬುಕುತ್ತೀರ ಮತ್ತು ಅಪ್ಪುಮಣಿಯಂಡ, ೧೨ ಗಂಟೆಗೆ ಮಾದೆಯಂಡ ಮತ್ತು ಚೋಳಂಡ, ೧ ಗಂಟೆಗೆ ಬೊಳ್ಳೆರ ಮತ್ತು ಬಾಚಳಿರ, ೨ ಗಂಟೆಗೆ ಚೀರಂಡ ಮತ್ತು ಪಾಂಡೀರ (ಹೆಬ್ಬೆಟ್ಟಗೇರಿ), ೩ ಗಂಟೆಗೆ ಮಚ್ಚುರ ಮತ್ತು ಚಪ್ಪಂಡ, ೪ ಗಂಟೆಗೆ ಬಾಚಮಂಡ ಮತ್ತು ಮಾಚಿಮಾಡ ಕುಟುಂಬದ ತಂಡಗಳು ಸೆಣಸಾಟ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net