

ಕುಶಾಲನಗರ:
ಆಂದ್ರಪ್ರದೇಶದ ಕಾಕಿನಾಡ ಜಿಲ್ಲೆಯ ಡಿ.ಎಸ್.ಎ. ಮೈದಾನದಲ್ಲಿ ಫೆ. 28ರ ವರೆಗೆ ನಡೆಯುವ ಸರ್ಕಾರಿ ನೌಕರರ ರಾಷ್ಟಿçÃಯ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ಕೊಡಗು ಜಿಲ್ಲೆಯ 8 ಮಂದಿ ನೌಕರ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಸತತವಾಗಿ 18 ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ಚಾಂಪಿಯನ್‌ಶಿಪ್ ಕೀರ್ತಿಗೆ ಭಾಜನರಾಗಿದ್ದು, ಇದೀಗ 19ನೇ ವರ್ಷ ಕೂಡ ಜಯ ಸಾಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದು,
ಆಟಗಾರರಾಗಿ ಜಾಗೃತ್, ಪೂಣ್ಣಚ, ಚಂದ್ರಶೇಖರ್, ಮೌನ ಮೊಣ್ಣಪ್ಪ, ಸೋಮಣ್ಣ, ಮಾಚಯ್ಯ ಹಾಗೂ ಸತೀಶ್ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಬಾರಿ ಕೊಡಗಿನ 7 ಹಾಕಿ ಆಟಗಾರರು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ರಾಜ್ಯಕ್ಕೆ ಹಾಗೂ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದರು. ಈ ಬಾರಿ 8 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ತಂಡದ ತರಬೇತುದಾರ ನವೀನ್ ತಿಳಿಸಿದ್ದಾರೆ.