

ಮಡಿಕೇರಿ:
ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಸಂದರ್ಭ ಕ್ರೀಡಾಪಟುಗಳಿಗೆ ಶೇ.3ರಷ್ಟು ಮೀಸಲಾತಿ ಇದ್ದು, ಇತರ ಇಲಾಖೆಗಳಲ್ಲಿ ಶೇ. 2ರಷ್ಟು ಮಿಸಲಾತಿ ಒದಗಿಸುವ ಮೂಲಕ ರಾಜ್ಯ ಸರ್ಕಾರ ಕ್ರೀಡೆಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. ಮುದ್ದಂಡ ಕುಟುಂಬದ ವತಿಯಿಂದ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಕಳೆದ 1 ತಿಂಗಳಿನಿAದ ನಡೆಯುತ್ತಿದ್ದ 25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಹಬ್ಬದ ಸಮಾರೋಪ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ರೀಡೆಗೆ ಉತ್ತಮ ರೀತಿಯಲ್ಲಿ ಉತ್ತೇಜನ ಕೊಡುವ ಕೆಲಸ ಮಾಡುತ್ತಿದೆ. ಕೊಡವ ಹಾಕಿ ಉತ್ಸವಕ್ಕೆ ಸರ್ಕಾರ 1 ಕೋಟಿ ರೂ. ಅನುದಾನ ಕೊಡುತ್ತಾ ಬಂದೆ. ಮುಖ್ಯಮಂತ್ರಿ ಗಮನಕ್ಕೆ ತಂದು ಇನ್ನೂ ಹೆಚ್ಚಿನ ಅನುದಾನ ಕೊಡಿಸಲಾಗುವುದು. ಹಾಕಿ ಕ್ರೀಡೆಗೆ ಸರ್ಕಾರದಿಂದ ಇನ್ನಷ್ಟು ಉತ್ತೇಜನ ಕೊಡಲಾಗುವುದು. ದೇಶದಲ್ಲಿ ಹಾಕಿ ಪ್ರಸಿದ್ಧವಾಗಲು ಕೊಡವರೇ ಕಾರಣ. ಸ್ವಾತಂತ್ರö್ಯಪೂರ್ವದಲ್ಲಿ ರಾಜ್ಯ ಆಗಿದ್ದ ಕೊಡಗು ಹಲವು ಸೇನಾ ನಾಯಕರು, ಕ್ರೀಡಾ ಪಟುಗಳನ್ನು ದೇಶಕ್ಕೆ ಕೊಟ್ಟಿದೆ. ಒಂದು ಸಮುದಾಯ ಕ್ರೀಡೆಯನ್ನು ರಕ್ಷಣೆ ಮಾಡುತ್ತಿರುವುದು ಕೊಡಗಿನಲ್ಲಿ ಹೊರತುಪಡಿಸಿದತೆ ಜಗತ್ತಿನಲ್ಲಿ ಎಲ್ಲೂ ಇಲ್ಲ. ಹಾಕಿ ಆಟಕ್ಕೆ 4 ಸಾವಿರ ವರ್ಷಗಳ ಇತಿಹಾಸ ಇದೆ. ಬ್ರಿಟಿಷರ ಮೂಲಕ ಈ ಆಟ ಭಾರತಕ್ಕೆ ಬಂತು. ದೇಶದ ಕೀರ್ತಿ, ಗೌರವ ಕಾಪಾಡಿದ ಕ್ರೀಡೆ ಹಾಕಿ.
ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಮೂಲಕ ಹಾಕಿಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಕೆಲಸ ಆಗಿದೆ. ಪ್ರತಿ ವರ್ಷವೂ ಹಾಕಿಯಲ್ಲಿ ಪಾಲ್ಗೊಳ್ಳುವ ಕೊಡವ ಕುಟುಂಬ ತಂಡಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ 25 ವರ್ಷಗಳ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ದೇಶದ ಕ್ರೀಡಾ ರಂಗದ ಇತಿಹಾಸದಲ್ಲಿಯೇ ಐತಿಹಾಸಿಕ ಸಾಧನೆಯಾಗಿದೆ. ಕೊಡವರದ್ದು ಸಣ್ಣ ಸಮುದಾಯ ಆಗಿದ್ದರೂ ದೇಶಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಕ್ರೀಡಾಪಟುಗಳನ್ನು ನೀಡಿದೆ. ದೇಶಕಟ್ಟುವ ಕಾಯಕದಲ್ಲಿರುವಂತೆಯೇ ಕ್ರೀಡೆಯಲ್ಲಿಯೂ ಕೊಡವರ ಕೊಡುಗೆ ಮಹತ್ವದ್ದಾಗಿದೆ. ಸರ್ಕಾರದಿಂದ ಕೊಡವ ಕೌಟುಂಬಿಕ ಹಾಕಿಗೆ ಹೆಚ್ಚಿನ ಅನುದಾನ ನೀಡುವಲ್ಲಿ ನಾವೆಲ್ಲಾ ಸಹಕರಿಸುತ್ತೇವೆ. ತಂದೆ ಆರ್. ಗುಂಡೂರಾವ್ ಅವರು ಹಾಕಿ ದಿಗ್ಗಜ ಎಂ.ಪಿ. ಗಣೇಶ್ ಅವರಿಗೆ ಬೆಂಗಳೂರಿನಲ್ಲಿ ನಿವೇಶನ ನೀಡಲು ಮುಂದಾದಾಗ ಆ ನಿವೇಶನ ನಿರಾಕರಿಸಿ ಅಲ್ಲಿ ಕ್ರೀಡಾ ಅಕಾಡೆಮಿಗೆ ಜಾಗ ಕಲ್ಪಿಸಲು ಅವರು ಕಾರಣರಾದರು ಎಂದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾತನಾಡಿ ಸಮಾಜದ ಅಭಿವೃದ್ಧಿಗಾಗಿ ಕೊಡವರ ಕೊಡುಗೆ ಅತ್ಯಂತÀ ಮಹತ್ವದ್ದಾಗಿದೆ. ಕೊಡಗಿನಿಂದ ಶಾಸಕರಾಗಿ ಆಯ್ಕೆ ಆಗಿರುವ ಸಿ.ಎಂ. ಕಾನೂನು ಸಲಹೆಗಾರÀ ಎ.ಎಸ್. ಪೊನ್ನಣ್ಣ ಸರ್ಕಾರದ ಟ್ರಬಲ್ ಶೂಟರ್ ಎಂದೇ ಖ್ಯಾತಿಯಾಗಿದ್ದಾರೆ. ರಾಜ್ಯ ಸರ್ಕಾರ ಎಂದಿಗೂ ಕೊಡಗು ಮತ್ತು ಕೊಡವರ ಪರವಾಗಿ ಇರುತ್ತದೆ. ಕೊಡಗಿಗೆ ಯಾವುದೇ ಸಹಾಯ ಬೇಕಿದ್ದರೂ ಸರ್ಕಾರದ ಅಗತ್ಯ ನೆರವು ನೀಡಲು ಸಿದ್ಧ. ಮುಂದಿನ ವರ್ಷಗಳಿಂದ ಕೊಡವ ಕೌಟುಂಬಿಕ ಹಾಕಿಗೆ ಹೆಚ್ಚಿನ ಅನುದಾನ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಬೆಂಗಳೂರು ಕೊಡವ ಸಮಾಜಕ್ಕೆ 50 ಕೋಟಿ ರೂ. ಹೆಚ್ಚು ಮೌಲ್ಯದ ಜಮೀನು ಕಡಿಮೆ ಬೆಲೆಗೆ ಕೊಡವ ಮೂಲಕ ಸರ್ಕಾರ ಕೊಡವರಿಗೆ ನೆರವಾಗಿದೆ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ದೇಶದ ಜನತೆಯ ಒಗ್ಗೂಡುವಿಕೆಯಲ್ಲಿ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ. ಕ್ರೀಡೆಯಲ್ಲಿ ಜಾತ, ಧರ್ಮದ ಭಿನ್ನತೆ ಬಿಟ್ಟು ಕ್ರೀಡಾಮನೋಭಾವನೆಯಿಂದ ಎಲ್ಲರೂ ಒಗ್ಗೂಡುತ್ತಾರೆ. ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ 25 ವರ್ಷಗಳ ಸುದೀರ್ಘ ಕಾಲ ನಡೆಯುತ್ತಾ ಬಂದಿರುವುದು ಕ್ರೀಡಾ ರಂಗದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಕೊಡಗಿನಲ್ಲಿ ಹಾಕಿ ಪಂದ್ಯಾಟದ ಆಯೋಜನೆಗೆ ಶಾಶ್ವತವಾದ ಸೌಲಭ್ಯದ ಅಗತ್ಯವಿದೆ. ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದರೆ ಕೇಂದ್ರದೊAದಿಗೆ ಈ ನಿಟ್ಟಿನಲ್ಲಿ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಹಾಕಿ ಮತ್ತು ದೇಶದ ಸೈನ್ಯಕ್ಕೆ ಕೊಡವರ ಕೊಡುಗೆ ಬಗ್ಗೆ ಪರಮೇಶ್ವರ್ ಸತ್ಯದ ಮಾತನ್ನು ನೇರವಾಗಿ ಹೇಳಿದ್ದಾರೆ. ಇಂದಿನ ಸಂಖ್ಯಾಬಲದ ರಾಜಕೀಯ ವ್ಯವಸ್ಥೆಯಲ್ಲಿ ಇದು ಎಲ್ಲರಿಗೂ ಸಾಧ್ಯವಿಲ್ಲ. ದೇಶಕ್ಕೆ ಕೊಡವರ ಕೊಡುಗೆ ಗುರುತಿಸುವ ಕೆಲಸ ಆಗಬೇಕು. ಜಿಲ್ಲೆಯ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಸರ್ಕಾರದಿಂದ ಎಲ್ಲಾ ಸಹಕಾರ ಸಿಗುತ್ತಿದೆ. ಪೊನ್ನಂಪೇಟೆಯ ಬಾಲಕಿಯರ ಕ್ರೀಡಾ ವಸತಿ ನಿಲಯ ಸೇರಿದಂತೆ ಜಿಲ್ಲೆಯ ವಿವಿಧ ಕ್ರೀಡಾ ಮೈದಾನಗಳು, ಕ್ರೀಡಾಸೌಲತ್ತುಗಳನ್ನು ಮುಖ್ಯಮಂತ್ರಿ ಒದಗಿಸಿದ್ದಾರೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿದರು. ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಎಸ್‌ಪಿ ಕೆ. ರಾಮರಾಜನ್, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಎಸಿ ವಿನಾಯಕ ನರ್ವಡೆ, ಮುದ್ದಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ರಶಿನ್ ಸುಬ್ಬಯ್ಯ, ಮುದ್ದಂಡ ದೇವಯ್ಯ ಮುದ್ದಂಡ ಡಾಲಿ ತಿಮ್ಮಯ್ಯ ಮುದ್ದಂಡ ಡೀನ್ ಬೋಪಣ್ಣ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಮತ್ತಿತರರು ಇದ್ದರು.