ಫೆ ೨೫, ೨೬ರಂದು ಹೋಬಳಿಮಟ್ಟದ ಕ್ರೀಡೋತ್ಸವ

cfda05aa-5140-44ca-ad04-0360abf5acff
Published on

ಮಡಿಕೇರಿ: ಮೂರ್ನಾಡು ಹೋಬಳಿ ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ ಹೋಬಳಿಮಟ್ಟದ ೭ನೇ ವರ್ಷದ ವಾರ್ಷಿಕ ಕ್ರೀಡೋತ್ಸವ ಫೆ ೨೫, ೨೬ರಂದು ಮೂರ್ನಾಡು ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್ ರೈ ತಿಳಿಸಿದರು.


ಜಿಲ್ಲೆಯಲ್ಲಿನ ತಂಡಗಳು ಹೋೀಬಳಿ ಮಟ್ಟದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಹೋಬಳಿಯಿಂದ ಒಂದಕ್ಕಿಂತ ಅಧಿಕ ತಂಡಗಳು ಭಾಗವಹಿಸಬಹುದಾಗಿದೆ. ಕ್ರಿಕೆಟ್, ಹಗ್ಗಜಗ್ಗಾಟ, ಲಕ್ಕಿ ಸರ್ಕಲ್, ನಿಂಬೆ ಚಮಚ ಓಟ, ಮ್ಯೂಸಿಕಲ್ ಚೇರ್, ವಯಸ್ಕರ ಓಟ, ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಅಂದು ಬೆಳಗ್ಗೆ ೯.೩೦ ಗಂಟೆಗೆ ಕ್ರೋಡೋತ್ಸವ ಆರಂಭಗೊಳ್ಳಲಿದೆ. ಸಮಾರೋಪ ಸಮಾರಂಭ ೨೬ರ ಸಂಜೆ ೫.೩೦ ಗಂಟೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕ್ರಿಕೆಟ್ ಪಂದ್ಯಾಟಕ್ಕೆ ಜ೧೦ ರೊಳಗೆ ತಂಡಗಳ ಹೆಸರು ನೋಂದಾಯಿಸಿಕೊಳ್ಳಬೇಕು ಎಂದ ಅವರು, ಹೆಚ್ಚಿನ ಮಾಹಿತಿಗೆ ೮೦೯೫೫೭೩೮೦೮ ಸಂಖ್ಯೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಎನ್.ಜಯರಾಂ ರೈ, ಮಹಿಳಾ ಘಟಕದ ಅಧ್ಯಕ್ಷೆ ಬಿ.ಬಿ.ಜಯಂತಿ ರೈ, ಸದಸ್ಯರುಗಳಾದ ಬಿ.ಎಸ್.ಕುಶನ್ ರೈ, ಬಿ.ಎಸ್.ಅರುಣ್ ರೈ, ಸುಬ್ಬಣ್ಣ ರೈ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net