

ವಿಜಯಪುರ : ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸೆ. 6 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ವಿವಿಧ 15 ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ನಡೆಯಲಿದೆ.ವಿಜಯಪುರ ಉಪ ವಿಭಾಗಾಧಿಕಾರಿಗಳು ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದ ಮಾರುತಿ ದೇವಸ್ಥಾನದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾ,ಪಂ. ಕಾರ್ಯಾಲದಲ್ಲಿ, ವಿಜಯಪುರ ಗ್ರೇಡ್&2 ತಹಸೀಲ್ದಾರ್ ವಿಜಯಪುರ ನಗರದ ಕಸಬಾ ಚಾವಡಿ ಜೆಎಂ ರಸ್ತೆಯಲ್ಲಿನ ಗ್ರಾಮ ಆಡಳಿತಾಧಿಕಾರಿ ಕಾರ್ಯಾಲಯದಲ್ಲಿ ಹಾಗೂ ತಿಕೋಟಾ ಗ್ರೇಡ್&2 ತಹಸೀಲ್ದಾರ್ ಯತ್ನಾಳ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಪಿಂಚಣಿ ಅದಾಲತ್ ನಡೆಸುವರು.
ಬಬಲೇಶ್ವರ ಗ್ರೇಡ್&2 ತಹಸೀಲ್ದಾರ್ ಹೊಸೂರ ಗ್ರಾಮದ ಹನುಮಾನ ದೇವಸ್ಥಾನದಲ್ಲಿ, ಬಸವನಬಾಗೇವಾಡಿ ಗ್ರೇಡ್&2 ತಹಸೀಲ್ದಾರ್ ನಾಗೂರ ಗ್ರಾಮದ ಮಲ್ಲಯ್ಯನ ಗುಡಿಯಲ್ಲಿ, ನಿಡಗುಂದಿ ತಹಸೀಲ್ದಾರ್ ಹುಣಶ್ಯಾಳ ಪಿ.ಸಿ. ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ, ಕೊಲ್ಹಾರ ತಹಶೀಲ್ದಾರ ಚಿಕ್ಕ ಆಸಂಗಿ ತಾಲೂಕಿನ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಾಗೂ ಮುದ್ದೇಬಿಹಾಳ ಗ್ರೇಡ್&2 ತಹಸೀಲ್ದಾರ್ ಬೂದಿಹಾಳ ಪಿ.ಎನ್.ನ ಮಾರುತೇಶ್ವರ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸುವರು.
ತಾಳಿಕೋಟೆ ಗ್ರೇಡ್&2 ತಹಸೀಲ್ದಾರ್ ಗುತ್ತಿಹಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ, ಇಂಡಿ ಗ್ರೇಡ್&2 ತಹಸೀಲ್ದಾರ್ ಅಗಸನಾಳ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ, ಚಡಚಣ ತಹಸೀಲ್ದಾರ್ ಗೋಟ್ಯಾಳ ಗ್ರಾಮದ ಜಹಾಂಗೀರಸಾಬ ದರ್ಗಾದಲ್ಲಿ, ಸಿಂದಗಿ ಗ್ರೇಡ್&2 ತಹಸೀಲ್ದಾರ್ ಬಸ್ತಿಹಾಳ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ, ದೇವರಹಿಪ್ಪರಗಿ ತಹಸೀಲ್ದಾರ್ ಜಾಲವಾದ ಎಲ್ಟಿ ನಂ. 2 ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಹಾಗೂ ಆಲಮೇಲ ಗ್ರೇಡ್&2 ತಹಸೀಲ್ದಾರ್ ಕುರುಬತಳ್ಳಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪಿಂಚಣಿ ಅದಾಲತ್ ನಡೆಸುವರು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.