ಇಂದು ಹೋಬಳಿ ಮಟ್ಟದ ಪಿಂಚಣಿ ಅದಾಲತ್​

Site inspection with officials, steps taken to beautify Taj Bawadi memorial
The Eightfold Path of Donation and Puja Festival
Published on

ವಿಜಯಪುರ: ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್​ ನಡೆಸಲಾಗುತ್ತಿದ್ದು, ಆ ನಿಟ್ಟಿನಲ್ಲಿ ಆ. 2 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ವಿವಿಧ 13 ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್​ ನಡೆಯಲಿದೆ.

ವಿಜಯಪುರ ಉಪ ವಿಭಾಗಾಧಿಕಾರಿಗಳು ಆಕಳವಾಡಿಯ ಹನುಮಂತೇಶ್ವರ ದೇವಸ್ಥಾನದಲ್ಲಿ, ಇಂಡಿ ಉಪವಿಭಾಗಾಧಿಕಾರಿ ಆಲಹಳ್ಳಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ, ವಿಜಯಪುರ ಗ್ರೇಡ್​&2 ತಹಸೀಲ್ದಾರ್​ ಆಹೇರಿ (ಜ) ಗ್ರಾ.ಪಂ. ಕಾರ್ಯಾಲಯದಲ್ಲಿ ಹಾಗೂ ತಿಕೋಟಾ ಗ್ರೇಡ್​&2 ತಹಸೀಲ್ದಾರ್​ ಹರನಾಳ ಗ್ರಾಮದ ಲಕ್ಷಿ$್ಮ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್​ ನಡೆಸುವರು.

ಬಬಲೇಶ್ವರ ಗ್ರೇಡ್​&2 ತಹಸೀಲ್ದಾರ್​ ಕಾಖಂಡಕಿ ಗ್ರಾಮದ ಚಾವಡಿಯಲ್ಲಿ, ಬಸವನಬಾಗೇವಾಡಿ ಗ್ರೇಡ್​&2 ತಹಸೀಲ್ದಾರ್​ ಬ್ಯಾಕೋಡ್​ ಗ್ರಾಪಂ ಕಾರ್ಯಾಲಯದಲ್ಲಿ, ಕೊಲ್ಹಾರ ತಹಸೀಲ್ದಾರ್​ ಹಿರೇಗರಸಂಗಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಾಗೂ ತಾಳಿಕೋಟೆ ಗ್ರೇಡ್​&2 ತಹಸೀಲ್ದಾರ್​ ತಾಳಿಕೋಟೆಯ ವಾರ್ಡ್​ ನಂ. 21ರ ವ್ಯಾಪ್ತಿಯ ಗ್ರಾಮದೇವತೆ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್​ ನಡೆಸಲಿದ್ದಾರೆ.

ಮುದ್ದೇಬಿಹಾಳ ಗ್ರೇಡ್​&2 ತಹಸೀಲ್ದಾರ್​ ಗಂಗೂರ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ, ಇಂಡಿ ಗ್ರೇಡ್​&2 ತಹಸೀಲ್ದಾರ್​ ಸಾತಲಗಾಂವ ಅಮೋಸಿದ್ಧೇಶ್ವರ ದೇವಸ್ಥಾನದಲ್ಲಿ, ಚಡಚಣ ಗ್ರೇಡ್​&2 ತಹಸೀಲ್ದಾರ್​ ಗೋಡಿಹಾಳ ಬಿಸಲ ಸಿದ್ದರಾಯನ ದೇವಸ್ಥಾನದಲ್ಲಿ, ಸಿಂದಗಿ ತಹಸೀಲ್ದಾರ್​ ಅವರು ನಾಗಾವಿ ಕೆ.ಡಿ. ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಹಾಗೂ ದೇವರಹಿಪ್ಪರಗಿ ಗ್ರೇಡ್​&2 ತಹಸೀಲ್ದಾರ್​ ದೇವರೂರ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪಿಂಚಣಿ ಅದಾಲತ್​ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net