5 ರಂದು ಹೋಬಳಿಮಟ್ಟದ ಪಿಂಚಣಿ ಅದಾಲತ್​

WEB LOGO
Published on

ವಿಜಯಪುರ: ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕುರಿತ ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯ 13 ಗ್ರಾಮಗಳಲ್ಲಿ ಜು. 5ರ ಬೆಳಗ್ಗೆ 11 ಗಂಟೆಗೆ ಹೋಬಳಿಮಟ್ಟದ ಪಿಂಚಣಿ ಅದಾಲತ್​ ನಡೆಯಲಿದೆ.

ಅಂದು ವಿಜಯಪುರದ ಉಪ ವಿಭಾಗಾಧಿಕಾರಿಗಳು ಮುದ್ದೇಬಿಹಾಳ ತಾಲೂಕಿನ ಗುಡಿಹಾಳದ ಶ್ರೀ ಆನಂದ ಮಠದಲ್ಲಿ, ಇಂಡಿ ಉಪ ವಿಭಾಗಾಧಿಕಾರಿಗಳು ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಗ್ರಾ.ಪಂ. ಕಾರ್ಯಾಲಯದಲ್ಲಿ ಪಿಂಚಣಿ ಅದಾಲತ್​ ನಡೆಸುವರು.

ವಿಜಯಪುರದ ಗ್ರೇಡ್​&2 ತಹಸೀಲ್ದಾರರು ಅಲಿಯಾಬಾದ್​ ಗ್ರಾಮದ ಗ್ರಾ.ಪಂ. ಕಾರ್ಯಾಲಯದಲ್ಲಿ, ತಿಕೋಟಾ ಗ್ರೇಡ್​&2 ತಹಸೀಲ್ದಾರರು ರಾಂಪೂರ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್​ ನಡೆಸುವರು.

ಬಬಲೇಶ್ವರ ಗ್ರೇಡ್​&2 ತಹಸೀಲ್ದಾರರು ಮಮದಾಪೂರದ ಹನುಮಾನ ದೇವಸ್ಥಾನದಲ್ಲಿ, ಬಸವನ ಬಾಗೇವಾಡಿ ತಹಸೀಲ್ದಾರರು ಯಂಭತ್ನಾಳದ ಗೌರಿಶಂಕರ ದೇವಸ್ಥಾನದಲ್ಲಿ ಹಾಗೂ ನಿಡಗುಂದಿ ಗೇಡ್​&2 ತಹಸೀಲ್ದಾರರು ಗೋನಾಳದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್​ ನಡೆಸಲಿದ್ದಾರೆ.

ಕೊಲ್ಹಾರ ತಹಸೀಲ್ದಾರರು ತಡಲಗಿ ಗ್ರಾಮದ ಶ್ರೀರಾಮ ಅವಧೂತ ಮಠದಲ್ಲಿ, ತಾಳಿಕೋಟೆ ತಹಸೀಲ್ದಾರರು ತಾಳಿಕೋಟೆ ಪಟ್ಟಣದ ವಾರ್ಡ್​ ಸಂಖ್ಯೆ 2ರ ಮಾರುತಿ ದೇವಸ್ಥಾನದಲ್ಲಿ, ಇಂಡಿ ಗ್ರೇಡ್​&2 ತಹಸೀಲ್ದಾರರು ಲಿಂಗದಳ್ಳಿ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ, ಚಡಚಣ ಗ್ರೇಡ್​&2 ತಹಸೀಲ್ದಾರರು ಹಾವಿನಾಳದ ಬೀರಪ್ಪನ ದೇವಸ್ಥಾನದಲ್ಲಿ, ದೇವರಹಿಪ್ಪರಗಿ ಗ್ರೇಡ್​&2 ತಹಸೀಲ್ದಾರರು ಆನೆಮಡು ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಹಾಗೂ ಆಲಮೇಲ ತಹಸೀಲ್ದಾರರು ಆಸಂಗಿಹಾಳದ ಹನುಮಾನ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್​ ನಡೆಸಲಿದ್ದಾರೆ.

ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮೂಲಕ ಸರ್ಕಾರದ ಆದೇಶದಂತೆ ಪಿಂಚಣಿ ಪಾವತಿಸಲಾಗುತ್ತಿದೆ. ಈ ಕಾರ್ಯವನ್ನು ಸಂಬಂಧಿಸಿದ ಬ್ಯಾಂಕ್​, ಅಂಚೆ ಕಚೇರಿ ಅಧಿಕಾರಿಗಳ ಸಹಯೋಗದೊಂದಿಗೆ ತಪ್ಪದೆ ಮಾಡಿಸುವಂತೆ ಹಾಗೂ ಪಿಂಚಣಿ ಅದಾಲತ್​ನಲ್ಲಿ ಪಿಂಚಣಿದಾರರ ಮಾಹಿತಿಯೊಂದಿಗೆ ಎಲ್ಲ ಗ್ರಾಮದ ಗ್ರಾಮ ಲೆಕ್ಕಿಗರು, ಪಂಚಾಯಿತಿಯ ಕಾರ್ಯದರ್ಶಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net