ಕರ್ಕಶ ಹಾರ್ನ್‌ಗೆ ಕಡಿವಾಣ: ನ್ಯಾಮತಿಯಲ್ಲಿ ಕಾರ್ಯಾಚರಣೆಗೆ ಇಳಿದ ಖಾಕಿ ಪಡೆ

NMT POLICE 20
Published on

ನ್ಯಾಮತಿ: ಕಳೆದ ಹದಿನೈದು ದಿನಗಳಿಂದ ಕರ್ಕಶ ಹಾರ್ನ್ ಬಳಸದಂತೆ ಜಾಗೃತಿ ಮೂಡಿಸುತ್ತಿದ್ದು, ಪೊಲೀಸರು ಬುಧವಾರ ಕಾರ್ಯಾಚರಣೆ ಇಳಿದು ದಂಡದ ಬಿಸಿ ಮುಟ್ಟಿಸಿದರು.

ವಾಹನಗಳ ಕರ್ಕಶ ಶಬ್ದದ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಪಟ್ಟಣದ ಶಾಲೆ, ಕಾಲೇಜು ಆಸ್ಪತ್ರೆ ಸೇರಿ ವಿವಿಧೆಡೆ 15 ದಿನಗಳಿಂದ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದರು.

ಆದರೂ ಉಲ್ಲಂಘನೆ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪಿಎಸ್‌ಐ ಪಿ.ಎಸ್.ರಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು, ಕರ್ಕಶ ಶಬ್ದ ಮಾಡುತ್ತಿದ್ದ ವಾಹನಗಳನ್ನು ತಡೆದು ದಂಡ ವಿಧಿಸಿದರು. ಜತೆಗೆ ಕರ್ಕಶ ಹಾರ್ನ್ ಸಂಪರ್ಕ ಕಡಿತಗೊಳಿಸಿದರು.

ಮತ್ತೊಮ್ಮೆ ಅಳವಡಿಸಿಕೊಂಡು ರಸ್ತೆಗೆ ಇಳಿದರೆ ದುಪ್ಪಟ್ಟು ದಂಡ, ಜತೆಗೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಎರಡು ಸಾವಿರ ರೂ. ದಂಡ ಸಂಗ್ರಹಿಸಲಾಯಿತು.

ಕಾರ್ಯಾಚರಣೆಯಲ್ಲಿ ಎ.ಎಸ್.ಐ.ಚಂದ್ರಪ್ಪ, ಉಮೇಶ್, ದೇವರಾಜ್, ಮಂಜುನಾಥ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net