ಬಿದಿರು ಬೆಳೆಯಿಂದ ಉತ್ತಮ ಲಾಭ

hosakote trining program
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಹೆಚ್ಚು ಬೇಡಿಕೆಯಿರುವ ಬಿದಿರು ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸಬಲರಾಗಬಹುದು ಎಂದು ಹಿರಿಯ ವಿಜ್ಞಾನಿ ಡಾ.ಎಂ.ವಿ.ದೊರೈ ತಿಳಿಸಿದರು.
ತಾಲೂಕಿನ ಗೊಟ್ಟಿಪುರದಲ್ಲಿ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ಹಾಗೂ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಸಚಿವಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಿದಿರು ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಬೆಳೆಗೆ ಯಾವುದೇ ರೀತಿಯ ರೋಗ, ಕೀಟಬಾಧೆ ಇರುವುದಿಲ್ಲ. ಕಡಿಮೆ ನೀರಿನಲ್ಲಿ ಈ ಕೃಷಿ ಕೈಗೊಳ್ಳಬಹುದು ಎಂದರು.
ಬಿದಿರು ಸಂಸ್ಥೆ ಮುಖ್ಯಸ್ಥ ಪರಮೇಶ್ವರ್ ಅಯ್ಯರ್, ಬಿದಿರಿನ ಪ್ರಯೋಜನ, ಬಿದಿರಿನ ಸಂರಕ್ಷಣೆ, ಸಂಸ್ಕರಣೆ ಹಾಗೂ ಉಪಯೋಗ ಮತ್ತು ಮಾರುಕಟ್ಟೆಯಲ್ಲಿರುವ ಬೇಡಿಕೆಗಳ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net